ಕಾಸರಗೋಡು: ಅಸೋಸಿಯೇಶನ್ ಆಫ್ ಅಲ್ ಕೇರಳ ಗವರ್ನಮೆಂಟ್ ಟೀಚರ್ಸ್(ಎಕೆಜಿಟಿಸಿ)ಸಂಘಟನೆ 67ನೇ ರಾಜ್ಯ ಸಮ್ಮೇಳನ ಕಸರಗೋಡು ನಗರಸಭಾಂಗಣದಲ್ಲಿ ಶನಿವರ ಆರಂಭಗೊಂಡಿತು. ರಾಜ್ಯ ಉನ್ನತ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಇಲಾಖೆ ಸಚಿವೆ ಡಾ.ಆರ್.ಬಿಂದು ಸಮ್ಮೇಳನ ಉದ್ಘಾಟಿಸಿಸಿ ಮತನಾಡಿ, ಕೇರಳದ ಉನ್ನತ ಶಿಕ್ಷಣ ಕ್ಷೇತ್ರವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಗುಣಮಟ್ಟದ ಶ್ರೇಯಾಂಕದಲ್ಲಿ ಮುನ್ನಡೆ ಕಾಯ್ದುಕೊಳ್ಳಲು ಸಾಧ್ಯವಾಗಿದೆ. ಉನ್ನತ ಶಿಕ್ಷಣ ಕ್ಷೇತ್ರದಲ್ಲಿ, ಮೂಲಸೌಕರ್ಯಗಳ ವಿಸ್ತರಣೆಯೊಂದಿಗೆ ಶೈಕ್ಷಣಿಕ ಗುಣಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಸರ್ಕಾರ ಮಧ್ಯಸ್ಥಿಕೆಗಳನ್ನು ಮಾಡಲು ಸಮರ್ಥವಾಗಿದೆ ಎಂದು ತಿಳಿಸಿದರು. ಶಸಕರಾದ ಸಿ.ಎಚ್ ಕುಞಂಬು, ಎಂ. ರಾಜಗೋಪಾಲನ್, ಸಂಘಟನೆ ಪದಾಧಿಕರಿಗಳು ಉಪಸ್ಥಿತರಿದ್ದರು.
ನಂತರ 'ಯುಜಿಸಿ ಕರಡು ನೀತಿ 2025ರ ಸವಾಲುಗಳು ಮತ್ತು ಪರಿಣಾಮಗಳು' ಕುರಿತಾದ ಶೈಕ್ಷಣಿಕ ಸಮ್ಮೇಳನವನ್ನು ಕೆಸಿಎಚ್‍ಆರ್ ಅಧ್ಯಕ್ಷ ಡಾ. ಕೆ ಎನ್ ಗಣೇಶ್ ಉದ್ಘಾಟಿಸಿದರು. ಡಾ. ವಿನು ಭಾಸ್ಕರ್ ಅಧ್ಯಕ್ಷತೆ ವಹಿಸಿದ್ದರು. ಡಾ. ಎ ನಿಶಾಂತ್, ಡಾ. ಎ ನಸೀಬ್ , ಎಸ್ ಎಫ್ ಐ ರಾಜ್ಯ ಕಾರ್ಯದರ್ಶಿ ಪಿ.ಎಸ್ .ಸಂಜೀವ್ ಮಾತನಾಡಿದರು. ಡಾ. ಎಂ.ಎಸ್.ಮುರಳಿ ಸ್ವಾಗತಿಸಿದರು. ಡಾ. ಪಿ.ಆರ್.ರಾಜಕುಮಾರ ವಂದಿಸಿದರು.
ಮಾ 23ರಂದು ಬೆಳಗ್ಗೆ 10ಕ್ಕೆ ಎಲ್ ಡಿಎಫ್ ಸಂಚಾಲಕ ಟಿ.ಪಿ.ರಾಮಕೃಷ್ಣನ್ ಟ್ರೇಡ್‍ಯೂನಿಯನ್ ಸಂಘದ ಸಭೆ ಉದ್ಘಾಟಿಸುವರು. ಸಂಜೆ ಪದಾಧಿಕಾರಿಗಳ ಆಯ್ಕೆಯೊಂದಿಗೆ ಸಮ್ಮೇಳನ ಸಮಾರೊಪಗೊಳ್ಳುವುದು.