ಮಾನವರ ದೇಹಲ್ಲಿ ಪ್ರತಿಯೊಂದು ಅಂಗಗಳಿಗೂ ಅದರದ್ದೇ ಪ್ರಾಮುಖ್ಯತೆ ಉದೆ. ಯಾವುದೇ ಒಂದು ಅಂಗ ಊನವಾದರು ಅದರಿಂದ ಆತನ ಇಡೀ ಶರೀರ ಹಾನಿಗೊಳಗಾಗುತ್ತದೆ. ಅದರಲ್ಲೂ ಕಿಡ್ನಿ ವ್ಯಕ್ತಿಯೋರ್ವನಿಗೆ ಅವಿಭಾಜ್ಯ ಅಂಗ. ತನ್ನ ದೇಹ ಸಮತೋಲನದಲ್ಲಿಟ್ಟುಕೊಳ್ಳಲು ಆತ ಕಿಡ್ನಿಯ ಆರೋಗ್ಯ ಕಾಪಾಡಿಕೊಳ್ಳಬೇಕಿದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಕಿಡ್ನಿ ಸಮಸ್ಯೆಯಿಂದ ಬಳಲುವವರ ಸಂಖ್ಯೆ ಏರಿಕೆಯಾಗುತ್ತಲೇ ಇದೆ, ಅದರಲ್ಲೂ ನೀವು ಊಹಿಸದಷ್ಟರ ಪ್ರಮಾಣದಲ್ಲಿ ಈ ಸಂಖ್ಯೆ ಏರಿಕೆಯಾಗಿದೆ.
ಭಾರತೀಯ ಜನಸಂಖ್ಯೆಯ ಅಂದಾಜು ಶೇ. 10 ರಷ್ಟು ಜನರು ದೀರ್ಘಕಾಲದ ಮೂತ್ರಪಿಂಡ ಕಾಯಿಲೆ (CKD) ಎದುರಿಸುತ್ತಿದ್ದಾರೆ. ಇದು ಅಪಾಯಕಾರಿ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಇದಕ್ಕೆ ಹತ್ತು ಹಲವು ಕಾರಣಗಳ ಪಟ್ಟಿ ಮಾಡಲಾಗುತ್ತದೆ. ಅದರಲ್ಲೂ ಈ ಸಮಸ್ಯೆಗಳು ನಗರವಾಸಿಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿರುವುದನ್ನು ಕೂಡ ಗಮನಿಸಲಾಗಿದೆ.
ದೇಹದಲ್ಲಿನ ಕಲ್ಮಶಗಳ ತೆಗೆದು ಹಾಕಿ ನಮ್ಮ ಆರೋಗ್ಯ ಕಾಪಾಡಲು ಕಿಡ್ನಿ ಬಹಳ ಮುಖ್ಯ. ಅಧಿಕ ರಕ್ತದೊತ್ತಡ, ಅನೇಕ ಸಮಸ್ಯೆಗಳ ತಡೆಯಲು ಇದು ಸಹಕಾರಿಯಾಗಿದೆ. ಮೂತ್ರ ಪಿಂಡಗಳು ತಮಗಾಗುವ ಹಲವು ಸಮಸ್ಯೆಗಳನ್ನು ತಡೆಯುವಂತಹ ಶಕ್ತಿಯನ್ನು ನೈಸರ್ಗಿಕವಾಗಿಯೇ ಪಡೆದಿರುತ್ತವೆ. ಇದು ದೀರ್ಘಕಾಲದವರೆಗೂ ನಮ್ಮಲ್ಲಿ ಸಮಸ್ಯೆಗಳು ಕಂಡುಬರದಂತೆ ಎಚ್ಚರ ವಹಿಸಲಿದೆ. ಕೇವಲ 150 ಗ್ರಾಂ ತೂಕವಿರುವ ಕಿಡ್ನಿಗಳು ನೀವು ಊಹಿಸದಷ್ಟು ಕೆಲಸ ಮಾಡುತ್ತವೆ. ಮೂತ್ರಪಿಂಡಕ್ಕೆ ಹಾನಿಯಾದಾಗ ತಕ್ಷಣವೇ ಅದರ ಲಕ್ಷಣಗಳು ನಿಮಗೆ ಗೋಚರ ಆಗುವುದೇ ಇಲ್ಲ. ಕಿಡ್ನಿಯು ತನ್ನ ಸಮಸ್ಯೆಯನ್ನು ತಾನೆ ಬಗೆಹರಿಸಿಕೊಳ್ಳಲು ಮುಂದಾಗುತ್ತದೆ. ಹೀಗಾಗಿಯೇ ದೀರ್ಘಕಾಲವಾದ ಸಮಸ್ಯೆ ಹೆಚ್ಚಾಗುವುದು. ಹಾಗೆ ಇತ್ತೀಚಿಗೆ ನಮ್ಮ ಜೀವನಶೈಲಿ, ಆಹಾರ ಕ್ರಮಗಳು ಮೂತ್ರ ಪಿಂಡ ಸಮಸ್ಯೆ ಹೆಚ್ಚಾಗುತ್ತಿರಲು ಕಾರಣವಾಗುತ್ತಿದೆ ಎಂದು ತಿಳಿದುಬರುತ್ತದೆ. ಇನ್ನು ಕಿಡ್ನಿಯ ಆರೋಗ್ಯ ಕಾಪಾಡುವುದು ಹಾಗೆ ಕಿಡ್ನಿ ಆರೋಗ್ಯ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಮಾರ್ಚ್ 13ರಂದು ವಿಶ್ವ ಕಿಡ್ನಿ ದಿನವನ್ನಾಗಿ ಆಚರಿಸಲಾಗುತ್ತಿದೆ. ಹಾಗಾದ್ರೆ ಕಿಡ್ನಿಯ ಆರೋಗ್ಯ ಕಾಪಾಡಲು ನಾವೇನು ಮಾಡಬೇಕು? ಕಿಡ್ನಯ ಸಮಸ್ಯೆ ಉಂಟಾಗಿರುವುದು ತಿಳಿಯೋದು ಹೇಗೆ? ಆರಂಭಿಕ ಕಿಡ್ನಿ ಸಮಸ್ಯೆಯ ಲಕ್ಷಣವೇನು? ಹೀಗೆ ಕಿಡ್ನಿ ಕುರಿತಂತೆ ನಾವಿಂದು ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ.
ಸಾಮಾನ್ಯವಾಗಿ ಕಿಡ್ನಿಯಲ್ಲಿ ಕಲ್ಲಾಗುವುದು ಇತ್ತೀಚಿಗೆ ಹೆಚ್ಚುತ್ತಿರುವ ಸಮಸ್ಯೆಯಾಗಿದೆ. ವಯಸ್ಕರಲ್ಲಿ ಮಾತ್ರವಲ್ಲ ಮಕ್ಕಳಲ್ಲೂ ಇತ್ತೀಚಿಗೆ ಕಿಡ್ನಿ ಕಲ್ಲಿನ ಸಮಸ್ಯೆ ಹೆಚ್ಚುತ್ತಿರುವುದು ದೊಡ್ಡ ಸವಾಲಿನ ಜೊತೆಗೆ ಆತಂಕಕ್ಕೂ ಕಾರಣವಾಗುತ್ತಿದೆ. ಹಾಗಾದ್ರೆ ಮೂತ್ರಪಿಂಡದಲ್ಲಿ ಕಲ್ಲು ಉಂಟಾಗಲು ಕಾರಣವೇನು?
ಕಡಿಮೆ ನೀರು ಸೇವನೆ
ಮೂತ್ರಪಿಂಡದಲ್ಲಿ ಕಲ್ಲಾಗಲು ಕಡಿಮೆ ನೀರು ಸೇವನೆಯೇ ಬಹುಮುಖ್ಯ ಕಾರಣ ಆಗಿರಲಿದೆ. ದೈನಂದಿನ ಜೀವನದಲ್ಲಿ 3ರಿಂದ 4 ಲೀಟರ್ ನೀರಿನ ಅವಶ್ಯಕತೆ ಇದೆ. ಆದ್ರೆ ಹಲವರು ಈ ರೀತಿ ನೀರು ಕುಡಿಯುವುದನ್ನು ಕಡಿಮೆ ಮಾಡಿರುತ್ತಾರೆ. ಅದರಲ್ಲೂ ಕಡಿಮೆ ನೀರು ಕುಡಿದು ಹೆಚ್ಚು ಕೆಲಸ ಮಾಡುವುದು ಮೂತ್ರಪಿಂಡ ಮೇಲೆ ಒತ್ತಡ ಹೆಚ್ಚಾಗಲು ಕಾರಣವಾಗುತ್ತದೆ. ಇದು ಕಲ್ಲುಗಳ ಸೃಷ್ಟಿಗೆ ಕಾರಣವಾಗುತ್ತದೆ.
ಹೆಚ್ಚು ಉಪ್ಪು ಹಾಗೂ ಪ್ರೋಟಿನ್ ಸೇವನೆ
ನೀವು ಹೆಚ್ಚು ಉಪ್ಪಿನಾಂಶ ಭರಿತ ಆಹಾರ ಸೇವಿಸುವುದು ನಿಮ್ಮ ಕಿಡ್ನಿಯ ಮೇಲೆ ಪ್ರಭಾವ ಬೀರುತ್ತದೆ. ಲವಣಗಳನ್ನು ಹೆಚ್ಚು ಮಾಡಲಿದೆ. ಹಾಗೆ ಮೂತ್ರದಲ್ಲಿನ ಕ್ಯಾಲ್ಸಿಯಂ ಅಂಶ ಕೂಡ ಹೆಚ್ಚಾಗುವುದು ಮೂತ್ರಪಿಂಡದಲ್ಲಿ ಕಲ್ಲುಗಳ ರಚನೆಗೆ ಸಹಕಾರಿಯಾಗಲಿದೆ. ಹಾಗೆ ಪ್ರೋಟಿನ್ ಅಂಶ ಹೆಚ್ಚು ಸೇವಿಸುವುದು ಕೂಡ ಇದಕ್ಕೆ ಕಾರಣವಾಗಲಿದೆ.
ಕಾರ್ಬೋಹೈಡ್ರೇಟ್ ಅಥವಾ ಸಕ್ಕರೆಯುಕ್ತ ಆಹಾರ
ನೀವು ಕಾರ್ಬೋಹೈಡ್ರೇಟ್ ಆಹಾರ ಸೇವನೆ ಹೆಚ್ಚಿಸುವುದು ಕಿಡ್ನಿ ಕಲ್ಲಿಗೆ ಕಾರಣವಾಗುತ್ತಿದೆ. ಅದಲ್ಲೂ ಪ್ಯಾಕ್ ಮಾಡಲಾದ ಆಹಾರ, ತಂಪು ಪಾನೀಯ, ಫ್ರುಕ್ಟೋಸ್ ಅಂಶ ಹೆಚ್ಚಾಗಿರುವ ಆಹಾರಗಳಲ್ಲಿ ಹೆಚ್ಚಿನ ಯೂರಿಕ್ ಅಂಶ ಕಂಡುಬರುವ ಕಾರಣ ಕಿಡ್ನಿ ಕಲ್ಲಿಗೆ ನೇರವಾಗಿ ಕಾರಣವಾಗುತ್ತಿದೆ.
ವ್ಯಾಯಾಮ ಕೊರತೆ
ನಿಮ್ಮಲ್ಲಿ ವ್ಯಾಯಾಮದ ಕೊರತೆ ಉಂಟಾದರೆ ಕಿಡ್ನಿಯ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನಿತ್ಯ ವ್ಯಾಯಾಮ ಮಾಡದಿದ್ದರೂ ಆಗಾಗ ವ್ಯಾಯಾಮ, ಯೋಗ ಮಾಡುವುದು ಕಿಡ್ನಿ ಆರೋಗ್ಯಕ್ಕೆ ಬಹಳ ಉತ್ತಮ. ಆದ್ರೆ ಇದ್ಯಾವುದೂ ಮಾಡದೆ ಇದ್ದಾಗ ಕಿಡ್ನಿ ಆರೋಗ್ಯದ ಮೇಲೆ ಪರಿಣಾಮ ಉಂಟು ಮಾಡಲಿದೆ.
ಹಾಗಾದ್ರೆ ಕಿಡ್ನಿ ಆರೋಗ್ಯವನ್ನ ಕಾಪಾಡಿಕೊಳ್ಳುವುದು ಹೇಗೆ? ಯಾವ ಫುಡ್ ಸೇವನೆಯು ಕಿಡ್ನಿ ಆರೋಗ್ಯ ಕಾಪಾಡಲಿದೆ ಎಂಬುದನ್ನು ತಿಳಿದುಕೊಳ್ಳಿ. ಕಿಡ್ನಿ ಸಮಸ್ಯೆಯಿಂದ ದೇಹದಲ್ಲಿ ನೀರು ತುಂಬಿಕೊಳ್ಳುವಂತಹ ಸಮಸ್ಯೆ ನೋಡಬಹುದು. ಇತ್ತೀಚಿಗೆ ಈ ಸಮಸ್ಯೆ ಎದುರಿಸುತ್ತಿರುವವರನ್ನು ನಾವು ಹೆಚ್ಚಾಗಿ ನೋಡುತ್ತಿದ್ದೇವೆ. ಹಾಗಾದ್ರೆ ಕಿಡ್ನಿ ಸಮಸ್ಯೆಗ
ಬೆಳ್ಳುಳ್ಳಿ
ಬೆಳ್ಳುಳ್ಳಿಯಲ್ಲಿನ ಆಮ್ಲದ ಅಂಶವು ಕಿಡ್ನಿ ಆರೋಗ್ಯಕ್ಕೆ ಬಹಳ ಉತ್ತಮ. ಬೆಳ್ಳುಳ್ಳಿಯಲ್ಲಿ ಆ್ಯಂಟಿಆಕ್ಸಿಡೆಂಟ್ ಹೆಚ್ಚಾಗಿ ಕಂಡುಬರುತ್ತವೆ. ಇದು ಆಹಾರದಲ್ಲಿ ಗಟ್ಟಿಯಾದ ಅಂಶಗಳನ್ನು ಮೃದುವಾಗಿಸುವ ಅಂಶ ಹೊಂದಿದೆ. ಹೀಗಾಗಿ ಆಹಾರದಲ್ಲಿ ಅಥವಾ ಬೇಯಿಸಿದ ಬೆಳ್ಳುಳ್ಳಿ ಸೇವನೆ ನಿಮ್ಮ ಆರೋಗ್ಯಕ್ಕೆ ಬಹಳ ಉತ್ತಮ.
ಕೆಂಪು ದೊಣ್ಣೆ ಮೆಣಸು
ಕ್ಯಾಪ್ಸಿಕಂ ನೀವು ಹಲವು ಖಾದ್ಯಗಳ ಜೊತೆಗೆ ಬಳಸಿರುತ್ತೀರಿ. ಆದ್ರೆ ಹಸಿರು ದೊಣ್ಣೆ ಮೆಣಸಿಗಿಂತ ಕೆಂಪು ಬಣ್ಣದ ದೊಣ್ಣೆ ಮೆಣಸು ಸವಿಯುವುದು ಕಿಡ್ನಿಗೆ ಬಹಳ ಉತ್ತಮ. ಕೆಂಪು ದೊಣ್ಣೆ ಮೆಣಸಿನಲ್ಲಿ ವಿಟಮಿನ್ ಎ, ವಿಟಮಿನ್ ಸಿ ಮತ್ತು ವಿಟಮಿನ್ ಬಿ6 ಸಮೃದ್ಧವಾಗಿದೆ. ಫಾಲಿಕ್ ಆಮ್ಲ ಮತ್ತು ನಾರಿನಾಂಶವು ಸಮೃದ್ಧವಾಗಿರುವುದು ಕಿಡ್ನಿಗೆ ಆರೋಗ್ಯಕ್ಕೆ ಬಹಳ ಉತ್ತಮ.
ಕಪ್ಪು ದ್ರಾಕ್ಷಿ
ಕೆಲವರು ಕಪ್ಪು ದ್ರಾಕ್ಷಿ ಆರೋಗ್ಯಕ್ಕೆ ಹಾನಿ ಎಂದುಕೊಳ್ಳುತ್ತಾರೆ. ಆದರೆ ಕಿಡ್ನಿ ಆರೋಗ್ಯಕ್ಕೆ ಈ ದ್ರಾಕ್ಷಿ ಬಹಳ ಉತ್ತಮ. ಕಿಡ್ನಿ ಮತ್ತು ಮೂತ್ರಕೋಶದಲ್ಲಿ ಕಂಡು ಬರುವ ಬ್ಯಾಕ್ಟೀರಿಯಾ ನಾಶಕ್ಕೆ ಇದು ಕಾರಣವಾಗಲಿದೆ. ಈ ದ್ರಾಕ್ಷಿಯಲ್ಲಿ ಫ್ಲಾವನಾಯ್ಡ್ ಎಂಬ ಅಂಶ ಕಂಡುಬರುತ್ತದೆ. ಇದು ಉರಿಯೂತ ಕಡಿಮೆ ಮಾಡಲಿದೆ.
ಸೇಬು
ಸೇಬು ನಮ್ಮ ದೇಹಕ್ಕೆ ಬಹಳ ಮುಖ್ಯ. ಇದರಲ್ಲಿ ಆ್ಯಂಟಿಆಕ್ಸಿಡೆಂಟ್ ಮತ್ತು ವಿಟಮಿನ್ ಸಮೃದ್ಧವಾಗಿದೆ. ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟ ಮತ್ತು ಮೂತ್ರವು ಶುದ್ಧವಾಗಿರಲು ಸೇಬು ಮುಖ್ಯ. ಹೀಗಾಗಿ ಒಂದು ಸೇಬು ನಿಮ್ಮ ಕಿಡ್ನಿ ಆರೋಗ್ಯ ಸುಧಾರಿಸಲು ಸಹಕಾರಿಯಾಗಲಿದೆ.
ಕಿಡ್ನಿ ಸಮಸ್ಯೆಗೆ ಪ್ರಮುಖವಾಗಿ ಡಯಾಲಿಸಿಸ್ ಮಾಡಲಾಗುತ್ತದೆ. ಡಯಾಲಿಸಿಸ್ ಎಂದರೇನು? ಇದನ್ನು ಏಕೆ ಮಾಡುತ್ತಾರೆ? ಎಂಬ ಕುರಿತು ನೀವು ಕೂಡ ತಿಳಿದುಕೊಂಡಿರಿ.
ಕಿಡ್ನಿ ತನ್ನ ಶುದ್ಧೀಕರಣ ಕಾರ್ಯ ಮಾಡಲು ಅಸಮರ್ಥವಾದಾಗ ಕೃತಕವಾಗಿ ಈ ಕಾರ್ಯ ಮಾಡಬೇಕಾಗುತ್ತದೆ. ಹಾಗೆ ಕಿಡ್ನಿಗೆ ಮರುಜೀವ ನೀಡುವ ಕಾರ್ಯ ಮಾಡಲಾಗುತ್ತದೆ ಇದನ್ನೇ ಡಯಾಲಿಸಿಸ್ ಎನ್ನಲಾಗುತ್ತದೆ. ಡಯಾಲಿಸಿಸ್ ಮೂಲಕ ರಕ್ತನಾಳಗಳಲ್ಲಿರುವ ಕಶ್ಮಲ ಹಾಗೂ ಅಧಿಕ ನೀರಿನಂಶ ತೆಗೆಯಲಾಗುವುದು. ಕಿಡ್ನಿ ಮಾಡುವ ಕಾರ್ಯವನ್ನು ಡಯಾಲಿಸಿಸ್ ಮೂಲಕ ಮಾಡಲಾಗುವುದು.
ಕಿಡ್ನಿ ಸಮಸ್ಯೆ ಹಂತವಾಗಿರುವ End-stage renal disease (ESRD) ತಲುಪಿರುವ ರೋಗಿಗಳಿಗೆ ಮಾತ್ರವೇ ಡಯಾಲಿಸಿಸ್ ಮಾಡಲಾಗುತ್ತದೆ. ಅತ್ಯಧಿಕ ರಕ್ತದೊತ್ತಡ, ಮಧುಮೇಹ ಸಮಸ್ಯೆಯಿದ್ದರೆ ಕಿಡ್ನಿಗೆ ಹಾನಿಯುಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಕಿಡ್ನಿ ಸಮಸ್ಯೆಯನ್ನು 5 ಹಂತದಲ್ಲಿ ಪರಿಗಣಿಸಲಾಗುತ್ತದೆ. 4 ಮತ್ತು 5ನೇ ಹಂತವು ಬಹಳ ಅಪಾಯಕಾರಿಯಾಗಿದೆ. 5ನೇ ಹಂತ ತಲುಪಿದ ರೋಗಿಗೆ ಕಿಡ್ನಿ ಕಸಿ ಅಥವಾ ಡಯಾಲಿಸಿಸ್‌ನ ಅಗತ್ಯ ಇರಲಿದೆ ಇಲ್ಲದಿದ್ದರೆ ಜೀವಕ್ಕೆ ಅಪಾಯ ಆಗುವ ಸಾಧ್ಯತೆ ಇರಲಿದೆ.