ವಾಷಿಂಗ್ಟನ್: ಶ್ವೇತ ಭವನದ ಹೊರಗಡೆ ಶಸ್ತ್ರಧಾರಿ ವ್ಯಕ್ತಿಯೊಬ್ಬನ ಮೇಲೆ ಅಮೆರಿಕದ ಕಾನೂನು ಜಾರಿ ಏಜೆನ್ಸಿ 'ಸೀಕ್ರೆಟ್ ಸರ್ವಿಸ್'ನ ಸಿಬ್ಬಂದಿ ಗುಂಡು ಹಾರಿಸಿದ್ದಾರೆ. ಆ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ವ್ಯಕ್ತಿಯ ಮೇಲೆ ಗುಂಡು ಹಾರಿಸಿದ ಹೊತ್ತಿನಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶ್ವೇತ ಭವನದಲ್ಲಿ ಇರಲಿಲ್ಲ.ಅವರು ಫ್ಲೋರಿಡಾದ ತಮ್ಮ ಮನೆಗೆ ತೆರಳಿದ್ದರು.
ತೀರಾ ಖಿನ್ನತೆಗೆ ಒಳಗಾಗಿರುವ ವ್ಯಕ್ತಿಯೊಬ್ಬ ಇಂಡಿಯಾನಾದಿಂದ ವಾಷಿಂಗ್ಟನ್‌ಗೆ ತೆರಳುತ್ತಿರಬಹುದು ಎಂದು ಸೀಕ್ರೆಟ್ ಸರ್ವಿಸ್‌ನ ಸಿಬ್ಬಂದಿಗೆ ಸ್ಥಳೀಯ ಅಧಿಕಾರಿಗಳಿಂದ ಶನಿವಾರ ಸುಳಿವೊಂದು ಸಿಕ್ಕಿತ್ತು.
ಸೀಕ್ರೆಟ್ ಸರ್ವಿಸ್‌ನ ಸಿಬ್ಬಂದಿ ಆತನ ಸನಿಹಕ್ಕೆ ತೆರಳಿದಾಗ ಆತ ಅಧಿಕಾರಿಗಳ ಶಸ್ತ್ರಾಸ್ತ್ರ ತೋರಿಸಿದ. ಆಗ ಆತನ ಮೇಲೆ ಗುಂಡು ಹಾರಿಸಲಾಯಿತು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.