ಮನೆಯಲ್ಲಿ ನೀವು ಮಾಡುವ ಕೆಲವೊಂದು ಕೆಲಸಗಳು ನಿಮಗೆ ಮತ್ತಷ್ಟು ಕೆಲಸ ಮಾಡಲು ಕಾರಣವಾಗುತ್ತವೆ. ಅಂದರೆ ನೀವೊಂದು ಕೆಲಸ ಮಾಡಲು ಮುಂದಾದಾದ ಅಲ್ಲಿ ಮತ್ತೊಂದು ಕೆಲಸ ನಿಮಗೆ ಅಡ್ಡಿಪಡಿಸುತ್ತದೆ. ಹಾಗೆ ಕೆಲವೊಂದು ಸಣ್ಣ ಪುಟ್ಟ ಕೆಲಸಗಳು ಬಹಳಷ್ಟು ಸಮಯ ಹಿಡಿಯುತ್ತವೆ. ಈ ಸಮಯದಲ್ಲಿ ನೀವು ತಾಳ್ಮೆ ಕಳೆದುಕೊಳ್ಳುವುದು ನೋಡಬಹುದು.
ಅದರಲ್ಲೂ ನೀವು ಒಂದು ಬಾಟಲಿಯಿಂದ ಅಥವಾ ಪ್ಯಾಕೆಟ್‌ನಿಂದ ಎಣ್ಣೆಯನ್ನು ಪ್ಲಾಸ್ಟಿಕ್ ಬಾಟಲಿಗೆ ಹಾಕುವುದು ಹಾಗೆ ಒಂದು ಗಾಜಿನ ಲೋಟದಲ್ಲಿರುವ ಹಾಲನ್ನು ಇನ್ನೊಂದು ಲೋಟಕ್ಕೆ ಹಾಕುವುದು ಇಂತಹ ಕೆಲಸಗಳು ಸಮಸ್ಯೆ ತರುವುದು ಕೂಡ ನೋಡಬಹುದು. ಹೌದು ಎಣ್ಣೆ ಒಂದು ಬಾಟಲಿಗೆ ಹಾಕುವುದು ಕೆಳಗೆ ಚೆಲ್ಲುವುದು, ಗಾಜಿನ ಲೋಟದಲ್ಲಿರುವ ಹಾಲು ಕೆಳಗೆ ಚೆಲ್ಲುವುದು ಎಲ್ಲರ ಮನೆಯ ಸಮಸ್ಯೆಯಾಗಿದೆ.
ಇದೇನು ದೊಡ್ಡ ಕೆಲಸ ಅಲ್ಲದಿದ್ದರೂ ಇದರಿಂದ ಮತ್ತೆ ಸುಚಿಗೊಳಿಸುವ ಕೆಲಸ ಹುಟ್ಟಿಕೊಳ್ಳುತ್ತದೆ. ಹೀಗಾಗಿ ಇಂತಹ ಕೆಲಸಗಳೇ ನಿಮಗೆ ಹಲವು ಬಾರಿ ಸವಾಲಾಗಿ ಕಾಡುವ ಜೊತೆಗೆ ಸಮಯ ಹಿಡಿಯುವಂತೆ ಮಾಡುತ್ತೆ. ಹಾಗೆ ತಾಳ್ಮೆ ಕೂಡ ಕಳೆದುಕೊಳ್ಳುವಂತೆ ಮಾಡಲಿದೆ. ಆದ್ರೆ ಈ ಎರಡು ಕೆಲಸ ಮಾಡಲು ಒಂದೇ ಒಂದು ಟ್ರಿಕ್ಸ್ ಬಳಸಿದ್ರೆ ನಿಮ್ಮ ಸಮಯದ ಜೊತೆಗೆ ಎಣ್ಣೆ , ಹಾಲು ಸೇರಿ ಯಾವುದೇ ವಸ್ತು ಪೋಲಾಗುವುದನ್ನು ತಡೆಯಬಹುದಾಗಿದೆ.
ಅದರಲ್ಲೂ ಒಂದೇ ಒಂದು ಸ್ಪೂನ್ ಬಳಸಿ ನೀವು ಈ ಎರಡು ವಸ್ತುಗಳನ್ನು ಒಂದು ಚೂರು ಚೆಲ್ಲದಂತೆ ಬಳಸಬಹುದು. ಹಾಗಾದ್ರೆ ಚಮಚ ಬಳಸಿಕೊಂಡು ಎಣ್ಣೆಯನ್ನು ಒಂದು ಬಾಟಲಿಯಿಂದ ಇನ್ನೊಂದು ಬಾಟಲಿಗೆ ಹಾಕುವುದು ಹೇಗೆ? ಹಾಲು ಚೆಲ್ಲದಂತೆ ಗಾಜಿನ ಲೋಟದಿಂದ ಇನ್ನೊಂದು ಲೋಟಕ್ಕೆ ಹಾಕಿಕೊಳ್ಳುವುದು ಹೇಗೆ ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ.
ಬಾಟಲಿಗೆ ಎಣ್ಣೆ ಹಾಕಲು ಸ್ಪೂನ್ ಬಳಸಿ
ಮನೆಯಲ್ಲಿ ಸಾಮಾನ್ಯವಾಗಿ ಎಣ್ಣೆಯನ್ನು ಒಂದು ಬಾಟಲಿಯಿಂದ ಇನ್ನೊಂದು ಬಾಟಲಿಗೆ ಬಗ್ಗಿಸುವಾಗ ಕೆಳಗೆ ಚೆಲ್ಲುವುದು ನೋಡಬಹುದು. ನೀವು ಎಷ್ಟೇ ಪ್ರಯತ್ನಿಸಿದರು ಒಂದು ಸ್ವಲ್ಪವಾದರೆ ಕೆಳಗೆ ವ್ಯರ್ಥವಾಗಿಯೇ ಆಗುತ್ತೆ. ಅದರಲ್ಲು ಪ್ಯಾಕೆಟ್‌ನಿಂದ ಒಡೆದು ನೇರವಾಗಿ ಬಾಟಲಿ ಒಳಗೆ ಹಾಕುವುದು ಕೂಡ ಒಂದು ಕಲೆ. ಆದ್ರೆ ಈ ಕೆಲಸ ಸುಲಭವಾಗಿ ಮಾಡೋಕೆ ಒಂದೇ ಒಂದು ಸ್ಪೂನ್ ಇದ್ದರೆ ಸಾಕು. ಹೌದು ಒಂದು ಸ್ಪೂನ್‌ನಿಂದ ಒಂದು ಹನಿ ಎಣ್ಣೆ ಕೆಳಗೆ ಬೀಳದಂತೆ ನೇರವಾಗಿ ಬಾಟಲಿಯಲ್ಲಿ ಇಳಿಯುವಂತೆ ಹಾಕಬಹುದು.
ಮೊದಲಿಗೆ ಇಡಿ ಸ್ಪೂನ್ ಅನ್ನು ನೀವು ಎಣ್ಣೆ ಹಾಕಬೇಕಾಗಿರುವ ಬಾಟಲಿಯಲ್ಲಿ ಹಾಕಿ. ಸ್ಪೂನ್‌ನ ಹಿಡಿಕೆ ಸಂಪೂರ್ಣ ಬಾಟಲಿಯಲ್ಲಿ ಇಳಿದಿರಬೇಕು, ಅದರ ಮೇಲ್ಭಾಗ ಮಾತ್ರ ಬಾಟಲಿಯ ಮುಚ್ಚಲದಲ್ಲಿ ಸಿಲುಕಿರಬೇಕು. ಈ ರೀತಿಯಾಗಿ ಸ್ಪೂನ್ ಹಾಕಿದ ಬಳಿಕ ನೇರವಾಗಿ ಸ್ಪೂನ್‌ನ ಮೇಲೆ ಎಣ್ಣೆ ಹಾಕಿ ಸ್ಪೂನ್ ತಲೆಯ ಮೇಲೆ ಎಣ್ಣೆ ಹಾಕಿದರೆ ಅದು ನೇರವಾಗಿ ಇಳಿದು ಬಾಟಲಿ ಸೇರುತ್ತದೆ. ಇದರಿಂದ ಎಣ್ಣೆ ಕೆಳಗೆ ಬೀಳುವ ಆತಂಕವೇ ಇರುವುದಿಲ್ಲ. ಇದು ಉಪಯೋಕರ ಟ್ರಿಕ್ಸ್ ಆಗಿದೆ.
ಗಾಜಿನ ಲೋಟದಿಂದ ಹಾಲು ಕೆಳಗೆ ಬೀಳದಂತೆ ಹಾಕಿ
ಗಾಜಿನ ಲೋಟದಲ್ಲಿ ನೀವು ಯಾವುದೇ ವಸ್ತು ಇಡಿ ಅದನ್ನು ಮತ್ತೊಂದು ಪಾತ್ರೆಗೆ ಇಲ್ಲವೆ ಲೋಟಕ್ಕೆ ಹಾಕುವಾಗ ಕೆಳಗೆ ಚೆಲ್ಲುತ್ತದೆ. ಇದು ಎಲ್ಲಾ ಪ್ರಕರಣದಲ್ಲು ನೋಡಬಹುದು. ಆದ್ರೆ ಒಂದು ಸ್ಪೂನ್‌ನಿಂದ ಒಂದು ಹನಿ ಕೆಳಗೆ ಬೀಳದಂತೆ ಒಂದು ಗ್ಲಾಸ್‌ನಲ್ಲಿದ್ದ ವಸ್ತುವನ್ನು ಇನ್ನೊಂದು ಗ್ಲಾಸ್‌ಗೆ ಹಾಕಬಹುದು. ಒಂದು ಸ್ಪೂನ್ ಅನ್ನು ಗಾಜಿನ ಲೋಟದ ಮೇಲೆ ಅಡ್ಡಲಾಗಿ ಇಡಬೇಕು. ಹಾಲು ತುಂಬಿರುವ ಗಾಜಿನ ಲೋಟದ ಮೇಲೆ ಅಡ್ಡಲಾಗಿ ಇಟ್ಟು ಅದರಿಂದ ಮತ್ತೊಂದು ಲೋಟಕ್ಕೆ ಹಾಕು ಸುರಿಯಬೇಕು. ಹೀಗೆ ಮಾಡಿದರೆ ಒಂದೇ ಒಂದು ಹನಿ ನೆಲಕ್ಕೆ ಬೀಳುವುದಿಲ್ಲ. ನೀವು ಕೂಡ ಈ ಎರಡು ಟ್ರಿಕ್ಸ್ ಬಳಸಿ ನೋಡಿ.