HEALTH TIPS

ಗಾಜಾದಲ್ಲಿ ಕದನ ವಿರಾಮ ವಿಸ್ತಣೆ; ಅಮೆರಿಕದ ಯೋಜನೆಗೆ ಇಸ್ರೇಲ್ ಒಪ್ಪಿಗೆ, ಹಮಾಸ್ ತಿರಸ್ಕಾರ

ಮುಸ್ಲಿಮರ ಹಬ್ಬ ರಂಜಾನ್ ಮತ್ತು ಯಹೂದಿಗಳ ಪವಿತ್ರ ದಿನ ಪಸ್ಸೋವರ್​ ಸಮಯದಲ್ಲಿ ಗಾಝಾ ಪಟ್ಟಿಯಲ್ಲಿ ತಾತ್ಕಾಲಿಕ ಕದನ ವಿರಾಮ ಪ್ರಕಟಿಸುವ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ರಾಯಭಾರಿ ಸ್ಟೀವ್ ವಿಟ್ಕಾಫ್ ಅವರ ಪ್ರಸ್ತಾಪವನ್ನು ಇಸ್ರೇಲ್ ಅಂಗೀಕರಿಸಲಿದೆ ಎಂದು ಅಲ್ಲಿನ ಪ್ರಧಾನಿ ಕಚೇರಿ ಭಾನುವಾರ ಮುಂಜಾನೆ ತಿಳಿಸಿದೆ.ಆದರೆ, ಇದನ್ನು ಹಮಾಸ್ ತಿರಸ್ಕರಿಸಿದೆ.

ವಿಟ್ಕಾಫ್ ಅವರ ಪ್ರಸ್ತಾಪ ಮಾಡಿರುವ ಕದನ ವಿರಾಮದ ಮೊದಲ ದಿನದಂದು, ಗಾಜಾದಲ್ಲಿ ಜೀವಂತವಾಗಿರುವ ಮತ್ತು ಸತ್ತ ಒತ್ತೆಯಾಳುಗಳಲ್ಲಿ ಅರ್ಧದಷ್ಟು ಜನರನ್ನು ಬಿಡುಗಡೆಗೊಳ್ಳುತ್ತಾರೆ . ಶಾಶ್ವತ ಕದನ ವಿರಾಮ ಪ್ರಕಟಗೊಂಡ ಬಳಿಕ ಉಳಿದ ಒತ್ತೆಯಾಳುಗಳನ್ನು ಸಹ ಬಿಡುಗಡೆಯಾಗಲಿದ್ದಾರೆ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿ ತಿಳಿಸಿದೆ.

ಶಾಶ್ವತ ಕದನ ವಿರಾಮದ ಮಾತುಕತೆಗೆ ಹೆಚ್ಚಿನ ಸಮಯದ ಅಗತ್ಯವಿದೆ ಎಂಬ ಹಿನ್ನೆಲೆಯಲ್ಲಿ, ವಿಟ್ಕಾಫ್ ಪ್ರಸ್ತುತ ಜಾರಿಯಲ್ಲಿರುವ ಕದನ ವಿರಾಮವನ್ನು ಇನ್ನೊಂದಿಷ್ಟು ದಿನ ವಿಸ್ತರಿಸುವ ಪ್ರಸ್ತಾಪ ಮಾಡಿದ್ದಾರೆ ಎಂದು ಇಸ್ರೇಲ್ ಪ್ರಧಾನಿ ಕಚೇರಿ ಮಾಹಿತಿ ನೀಡಿದೆ.

ಹಮಾಸ್​​ ತಿರಸ್ಕಾರ

ಗಾಜಾ ಪಟ್ಟಿಯಲ್ಲಿರುವ ಮೊದಲ ಹಂತದ ಕದನ ವಿರಾಮ ವಿಸ್ತರಿಸುವ ಇಸ್ರೇಲ್​​ನ ಯೋಜನೆಯನ್ನು ತಿರಸ್ಕರಿಸಲಾಗಿದೆ ಎಂದು ಹಮಾಸ್ ವಕ್ತಾರ ಹಝೆಮ್ ಖಾಸಿಮ್ ಶನಿವಾರ ಹೇಳಿದ್ದಾರೆ. ಆದರೆ, ಅವರು ವಿಟ್ಕಾಫ್ ಹೆಸರನ್ನು ಉಲ್ಲೇಖಿಸಿಲ್ಲ.

ಒಪ್ಪಂದದ ಎರಡನೇ ಹಂತದ ಬಗ್ಗೆ ಮಾತುಕತೆಗಳನ್ನು ಪ್ರಾರಂಭಿಸಲು ಇಸ್ರೇಲ್ ನಿರಾಕರಿಸಿದೆ ಎಂದು ಪ್ಯಾಲೆಸ್ತೀನ್ ಅಧಿಕಾರಿಗಳು ಸುದ್ದಿ ಸಂಸ್ಥೆ ರಾಯಿಟರ್ಸ್​ಗೆ ಮಾಹಿತಿ ನೀಡಿದ್ದಾರೆ.

ಹಮಾಸ್​ನ ಸಶಸ್ತ್ರ ವಿಭಾಗವು ಶನಿವಾರ ಗಾಜಾದಲ್ಲಿ ಇಸ್ರೇಲಿ ಒತ್ತೆಯಾಳುಗಳು ಇನ್ನೂ ತನ್ನ ವಶದಲ್ಲಿರುವುದನ್ನು ತೋರಿಸುವ ವೀಡಿಯೊವನ್ನು ಪೋಸ್ಟ್ ಮಾಡಿದೆ. ಜನವರಿ 19ರಂದು ಪ್ರಾರಂಭವಾದ ಹಂತ ಹಂತದ ಕದನ ವಿರಾಮ ಒಪ್ಪಂದದಲ್ಲಿ ಹೇಳಿದಂತೆ ವಿನಿಮಯ ಒಪ್ಪಂದದ ಮೂಲಕ ಮಾತ್ರ ಉಳಿದ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿದೆ.

ಏನತ್ಮಧ್ಯೆ, ಹಮಾಸ್ ಯುದ್ಧ ವಿರಾಮಕ್ಕೆ ಒಪ್ಪಿದರೆ ಮಾತ್ರ ವಿಟ್ಕಾಫ್ ಅವರ ಯೋಜನೆಯ ಬಗ್ಗೆ ಮಾತುಕತೆ ನಡೆಸಲಾಗುವುದು. ಪರಿಣಾಮ ಬೀರದೇ ಹೋದರೆ 42 ದಿನಗಳ ವಿರಾಮದ ಬಳಿಕ ಸಮರ ಶುರುವಾಗಬಹುದು ಎಂದು ನೆತನ್ಯಾಹು ಅವರ ಕಚೇರಿ ಎಚ್ಚರಿಕೆ ನೀಡಿದೆ.

ಕದನ ವಿರಾಮ ಒಪ್ಪಂದವು 15 ತಿಂಗಳ ಹೋರಾಟವನ್ನು ನಿಲ್ಲಿಸಿದೆ. ಸುಮಾರು 2,000 ಪ್ಯಾಲೆಸ್ತೀನ್​ ಕೈದಿಗಳು ಮತ್ತು 33 ಇಸ್ರೇಲಿ ಒತ್ತೆಯಾಳುಗಳು ಮತ್ತು ಐದು ಥಾಯ್ ಪ್ರಜೆಗಳ ವಿನಿಮಯಕ್ಕೆ ಅವಕಾಶ ಮಾಡಿಕೊಟ್ಟಿದೆ. ಇತ್ತೀಚೆಗೆ ಈಜಿಪ್ಟ್​​ ರಾಜಧಾನಿ ಕೈರೋದಲ್ಲಿ ಕದನ ವಿರಾಮದ ಬಗ್ಗೆ ಮಾತುಕತೆಗಳು ನಡೆಯುತ್ತಿವೆ, ಆದರೆ ಒಪ್ಪಂದಕ್ಕೆ ಕಾರಣವಾಗಿಲ್ಲ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries