ಮಧೂರು:ಪ್ರಾಪಂಚಿಕ ಸುಖಭೋಗಗಳಿಗಿಂತ ದೇವರ ಅನುಗ್ರಹ ಪಗ್ರಾಪ್ತಿಯ ನೆಮ್ಮದಿ ಹಿರಿದಾದುದು. ನಮ್ಮ ಎಲ್ಲಾ ನೋವು-ನಲಿವುಗಳ ನಿಯಂತ್ರಕ ಶಕ್ತಿ ಭಗವಂತ. ಈ ಹಿನ್ನೆಲೆಯಲ್ಲಿ ದೇವರ ಅನುಗ್ರಹ ಪಗ್ರಾಪಗ್ತಿಗೆ ನಿರಂತರ ಕರ್ಮಾನುಷ್ಠರಾಗಿ ಶುದ್ಧ ಹೃದಯದಿಂದ ಶಕ್ತ್ಯಾನುಸಾರ ಸೇವೆ ಸಲ್ಲಿಸುವುದು ಅಗತ್ಯ ಎಂದು ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿ ಅನುಗ್ರಹ ಸಂದೇಶದಲ್ಲಿ ತಿಳಿಸಿದರು.
ಮಧೂರು ಶ್ರೀಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯದಲ್ಲಿ ನಡೆಯುತ್ತಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವ-ಮೂಡಪ್ಪ ಸೇವೆಯ ಅಂಗವಾಗಿ ಭಾನುವಾರ ಬೆಳಿಗ್ಗೆ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.
ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಎಸ್.ಜೆ.ಪ್ರಸಾದ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಾಣಿಲ ಶ್ರೀಧಾಮದ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿದರು.ಬ್ರಹ್ಮಶ್ರೀ ದೇಲಂ.ಪಾಡಿ ಗಣೇಶ ತಂತ್ರಿ ಗೌರವ ಉಪಸ್ಥಿತರಿದ್ದು ಆಶೀರ್ವಚನ ನೀಡಿದರು.
ಹಿರಿಯ ಧಾರ್ಮಿಕ ಮುಂದಾಳು, ಉದ್ಯಮಿ ಕುಳೂರು ಕನ್ಯಾನ ಸದಾಶಿವ ಶೆಟ್ಟಿ, ಕರ್ನಾಟಕ ಉಚ್ಛ ನ್ಯಾಯಾಲಯದ ವಕೀಲ ಶಂಭು ಶರ್ಮ, ವೈದಿಕ ಸಮಿತಿ ಸಂಚಾಲಕ ಯು.ಬಾಲಕೃಷ್ಣ ಉಳಿಯ, ಸಮಿತಿ ಸದಸ್ಯೆ ಎಸ್ . ಎನ್. ರಾಮ ಶೆಟ್ಟಿ ಸಿರಿಬಾಗಿಲು, ಕ್ಷತ್ರಿಯ ಕೋಟೆಯಾರ್ ಸಂಘದ ಜಿಲ್ಲಾಧ್ಯಕ್ಷ ಕಮಲಾಕ್ಷ ಕಲ್ಲುಗದ್ದೆ, ರಘುರಾಮ ಶೆಟ್ಟಿ, ಶಿವಶಂಕರ ನೆಕ್ರಾಜೆ,ಸುರೇಶ್ ಕಣ್ಣೂರು ಉಪಸ್ತಿತರಿದ್ದು ಮಾತನಾಡಿದರು. ಸತ್ಯನಾರಾಯಣ ತಂತ್ರಿ ಸ್ವಾಗತಿಸಿ, ಯೋಗೀಶ್ ನಾಯ್ಕ್ ವಂದಿಸಿದರು. ಪತ್ರಕರ್ತ, ಸಾಹಿತಿ ರಾಧಾಕೃಷ್ಣ ಉಳಿಯತ್ತಡ್ಕ ಕಾರ್ಯಕ್ರಮ ನಿರೂಪಿಸಿದರು.
ವೈದಿಕ ಕಾರ್ಯಕ್ರಮಗಳ ಅಂಗವಾಗಿ ಭಾನುವಾರ ಬೆಳಿಗ್ಗೆ ಶ್ರೀಮದನಂತೇಶ್ವರ ದೇವರ ಪ್ರಸಾದಕ್ಕೆ ಶಿಖರ ಪ್ರತಿಷ್ಠೆ, ಶಿಖರ ಕಲಶಾಭಿಷೇಕ, ಅಷ್ಟಬಂಧ ಪ್ರತಿಷ್ಠೆ ತಂತ್ರಿಗಳ ನೇತೃತ್ವದಲ್ಲಿ ಋತ್ವಿಜರಿಂದ ನಡೆಯಿತು. ಬಳಿಕ ಜೀವಕುಂಭಾಭಿಷೇಕ, ಹಂಸರೂಪೀ ಸದಾಶಿವ ಹಾಗೂ ಶ್ರೀವಿಶ್ವನಾಥ ಉಪದೇವತಾ ಲಿಂಗ ಪ್ರತಿಷ್ಠೆ, ಪ್ರತಿಷ್ಠಾ ಕಲಶಾಭಿಷೇಕ, ಸಂಜೆ ಶ್ರೀದುರ್ಗಾ, ಸುಬ್ರಹ್ಮಣ್ಯ, ಶಾಸ್ತರಿಗೆ ಬಿಂಬಾಧಿವಾಸ, ವೀರಭದ್ರ ಅಧಿವಾಸ, ಅಧಿವಾಸ ಹೋಮಗಳು, ಹಂ¸ರೂಪೀ ಸದಾಶಿವ, ಶ್ರೀವಿಶ್ವನಾಥ ಸನ್ನಿಧಿಯಲ್ಲಿ ಕಲಶಾಧಿವಾಸ ನಡೆಯಿತು.
ಇಂದಿನ ಕಾರ್ಯಕ್ರಮ:
ಬೆಳಿಗ್ಗೆ 9.10ರ ಬಳಿಕ 11ರ ಮಧ್ಯೆ ಶ್ರೀಧರ್ಮಶಾಸ್ತಾ, ದುರ್ಗಾ, ಸುಬ್ರಹ್ಮಣ್ಯ, ವೀರಭದ್ರ ಪ್ರತಿಷ್ಠೆ, ಪ್ರತಿಷ್ಠಾ ಕಲಶಾಭಿಷೇಕ, ಹಂಸರೂಪೀ ಶ್ರೀಸದಾಶಿವ ಕಾಶಿ ವಿಶ್ವನಾಥ ಸನ್ನಿಧಿಯಲ್ಲಿ ಕಲಶಾಭಿಷೇಕ, ಶ್ರೀರುದ್ರಯಾಗ, ವಿವಿಧ ಹೋಮಗಳು, ಬಲಿಶಿಲಾ ಪ್ರತಿಷ್ಠೆ ನಡೆಯಲಿದೆ.