ಮಂಜೇಶ್ವರ: ಸರಳತೆ ಸಜ್ಜನಿಕೆಯನ್ನೊಳಗೊಂಡು ಸಮಾಜಮುಖಿಯಾಗಿ ಜೀವನ ಸಾಗಿಸಿದರೆ ಸಮಗ್ರ ವ್ಯಕ್ತಿತ್ವ ನಿರ್ಮಾಣವಾಗುತ್ತದೆ ಎಂದು ಶ್ರೀ ಕ್ಷೇತ್ರ ಒಡಿಯೂರಿನ ಸಾದ್ವಿ ಶ್ರೀ ಮಾತಾನಂದಮಂಯೀ ನುಡಿದರು.
ಅವರು ಮಂಜೇಶ್ವರ ಕೀರ್ತೇಶ್ವರ ಶ್ರೀ ಸದಾಶಿವ ದೇವಸ್ಥಾನದ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದಂಗವಾಗಿ ಬುಧವಾರ ರಾತ್ರಿ ನಡೆದ ಮಾತೆಯರ ಸಮಾವೇಶ "ಮಾತೃ ಸಂಗಮ" ವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಆದರ್ಶ ಬದುಕು ನಮ್ಮದಾಗಬೇಕಾದರೆ ನಾವು ಬದುಕುವುದರೊಂದಿಗೆ ಬೇರೆಯವರಿಗೆ ಬದುಕುವುದಕ್ಕಾಗಿ ಅವಕಾಶ ಮಾಡುವುದೇ ಜೀವನದ ಸಾರ್ಥಕತೆ ಎಂದು ತಮ್ಮ ಆಶೀರ್ವಚನದಲ್ಲಿ ನುಡಿದರು.
ಸಭೆಯ ಅಧ್ಯಕ್ಷತೆಯನ್ನು ಶ್ರೀ ಕೀರ್ತೇಶ್ವರ ಮಹಿಳಾ ಮಂಡಳಿ ಅಧ್ಯಕ್ಷೆ ರೇವತಿ ಶೈಲೇಶ್ ವಹಿಸಿದ್ದರು. ವೇದಿಕೆಯಲ್ಲಿ ನಿವೃತ್ತ ಪ್ರಾಂಶುಪಾಲೆ ಡಾ. ಕೆ.ವಿ. ಮಾಲಿನಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಂಜೇಶ್ವರ ತಾಲೂಕು ಯೋಜನಾಧಿಕಾರಿ ಶಶಿಕಲಾ ಸುವರ್ಣ, ರಾ.ಮಹಿಳಾ ಮೋರ್ಚಾ ಸದಸ್ಯೆ ಅಶ್ವಿನಿ ಎಂ.ಎಲ್, ಪ್ರಾಧ್ಯಾಪಕಿ ಪ್ರೊ.. ಸುಜಾತ, ಮಂಜೇಶ್ವರ ಗ್ರಾ.ಪಂ.ಅಧ್ಯಕ್ಷೆ ಜೀನ್ ಲವಿನಾ ಮೊಂತೇರೋ, ಕೃಷ್ಣವೇಣಿ, ರೇಖಾ ಪ್ರೇಮ್ ದಾಸ್, ಸುಪ್ರೀಯಾ ಶೆಣೈ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು, ಶುಭಾಸಂಶನೆಗೈದರು. ಕ್ಷೇತ್ರದ ಮಹಿಳಾ ಸಂಘದ ಸದಸ್ಯೆ ಕು. ತೃಪ್ತಿ ಪ್ರಾರ್ಥನೆ ಹಾಡಿ, ಸ್ವಾಗತಿಸಿದರು. ಅನುಷಾ ಶರತ್ ಕಾರ್ಯಕ್ರಮ ನಿರೂಪಿಸಿದರು. ಮಹಿಳಾ ಸಂಘದ ಸದಸ್ಯೆ ಸ್ನೇಹ ನವೀನ ವಂದಿಸಿದರು.
ಬಳಿಕ ಸಾಂಸ್ಕತಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ಕೀರ್ತೇಶ್ವರ ಮಹಿಳಾ ಮಂಡಳಿಯವರಿಂದ ನೃತ್ಯ ಸಂಗಮ, ನಾಟ್ಯ ಮಯೂರ ಡಾ. ಶ್ರೀಕಾಂತ್ ಕೊಂಡಾಣ ನೇತೃತ್ವದ ನಾಲ್ವಡಿ ಕೃಷ್ಣರಾಜ ಒಡೆಯರು ಪ್ರಶಸ್ತಿ ವಿಜೇತ ತಂಡ ಯಶಸ್ವಿ ಡಾನ್ಸ್ ಗ್ರೂಪ್ ಬೇರಿಕೆ ರಕ್ತಶ್ವರಿ ಕಟ್ಟೆ ಇವರಿಂದ "ನೃತ್ಯ ವೈಭವ" ನಡೆಯಿತು. ವೈದಿಕದಂಗವಾಗಿ ಬೆಳಿಗ್ಗೆ ಅಂಕುರ ಪೂಜೆ, 108 ಕಾಯಿ ಮಹಾಗಣಪತಿ ಹೋಮ, ತ್ರಿಕಾಲ ಪೂಜೆ, ಪವಮಾನ ಹೋಮ, ಶತರುದ್ರಾಭಿμÉೀಕ, ಮಹಾರುದ್ರಯಾಗ, ಮಹಾಪೂಜೆ ಅನ್ನಸಂತರ್ಪಣೆ, ಕೀರ್ತೇಶ್ವರ ಮಹಿಳಾ ಮಂಡಳಿ ಇವರಿಂದ ಭಜನಾ ಸಂಕೀರ್ತನೆ, ಸಂಜೆ ಶೂಲಿನಿ ಹೋಮ, ಮಹಾಬಲಿ ಪೀಠ ಪ್ರತಿಷ್ಠೆ ನಾಗದೇವರ ಬನದಲ್ಲಿ ವಾಸ್ತು ಪೂಜೆ, ಕಲಶಾಧಿವಾಸ ಅಧಿವಾಸ ಹೋಮ, ಅಂಕುರ ಪೂಜೆ, ರಾತ್ರಿ ಪೂಜೆ ಅನ್ನಸಂತರ್ಪಣೆ ನಡೆಯಿತು.