ಮುಳ್ಳೇರಿಯ: ಬೆಳ್ಳೂರು ಗ್ರಾಮ ಪಂಚಾಯತಿ 10ನೇ ವಾರ್ಡ್ ನಾಟೆಕ್ಕಲ್ಲು -ಜಾಲಮೂಲೆ ಕಾಂಕ್ರೀಟ್ ರಸ್ತೆಯ ಉದ್ಘಾಟನೆ ಇತ್ತೀಚೆಗೆ ನಡೆಯಿತು. ಬೆಳ್ಳೂರು ಗ್ರಾಮ ಪಂಚಾಯತಿ ಅಧ್ಯಕ್ಷ ಶ್ರೀಧರ ಎಂ ಬೆಳ್ಳೂರು ಉದ್ಘಾಟಿಸಿದರು.
ಆಡಳಿತ ಸಮಿತಿಯ ಕಾಲಾವಧಿಯಲ್ಲಿ 30 ಲಕ್ಷ ಕ್ಕಿಂತಲೂ ಅಧಿಕ ರೂ.ಗಳನ್ನು ಉದ್ಯೋಗ ಖಾತರಿ ಯೋಜನೆ ಮುಖಾಂತರ ವಿನಿಯೋಗಿಸಿ ನಾಟೆಕ್ಕಲ್ಲು-ಜಾಲಮೂಲೆ ರಸ್ತೆ ಕಾಮಗಾರಿ ಪೂರ್ಣಗೊಳಿಸಿ ಜನರಿಗೆ ನೀಡಿರುವ ಭರವಸೆಯನ್ನು ಪಾಲನೆ ಮಾಡಲು ಸಾಧ್ಯವಾಗಿದೆಯೆಂದು, ಇದು ಪಂಚಾಯತಿ ಆಡಳಿತ ಮಂಡಳಿಯ ಸಾಧನೆ ಎಂದು ಉದ್ಘಾಟಿಸಿ ಗ್ರಾ.ಪಂ.ಅಧ್ಯಕ್ಷರು ಅಭಿಪ್ರಾಯಪಟ್ಟರು. ಸಭೆಯಲ್ಲಿ ವಾರ್ಡ್ ಕನ್ವೀನರ್ ಚಂದ್ರಶೇಖರ ಆಚಾರ್ಯ, ಬಿಜೆಪಿ ಪಂಚಾಯತಿ ಸಮಿತಿ ಅಧ್ಯಕ್ಷ ಜಯಾನಂದ ಕುಳ, ಸುಂದರರಾಜ್ ರೈ ಪಂಬುಡೆ, ಉದ್ಯೋಗ ಖಾತರಿ ಯೋಜನೆಯ ಉದ್ಯೋಗಸ್ಥರು, ಸ್ಥಳೀಯ ವ್ಯಾಪಾರಿಗಳು, ಪಲಾನುಭವಿಗಳು ಉಪಸ್ಥಿತರಿದ್ದರು. ವಾರ್ಡ್ ಸದಸ್ಯರೂ ಗ್ರಾಮ ಪಂಚಾಯತಿ ಅರೋಗ್ಯ ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷ ಜಯಕುಮಾರ್ ಕೆ ಸ್ವಾಗತಿಸಿ, ವಂದಿಸಿದರು.