ಕಾಸರಗೋಡು: ನಗರಸಭೆ ಮತ್ತು ಮುಳಿಯಾರ್, ಕಾಸರಗೋಡು ನೀರು ಸರಬರಾಜು ಯೋಜನೆಯ ಬಾವಿಕ್ಕೆರೆ ಪಂಪ್ ಹೌಸ್ ನಲ್ಲಿ ತುರ್ತು ನಿರ್ವಹಣಾ ಕಾಮಗಾರಿ ನಡೆಸಲಿರುವ ಹಿನ್ನೆಲೆಯಲ್ಲಿ ಕಾಸರಗೋಡು ನಗರಸಭೆ, ಚೆಂಗಳ, ಮಧೂರು ಮತ್ತು ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಾ. 20ರಂದು ಭಾಗಶಃ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಕೇರಳ ಜಲ ಪ್ರಾಧಿಕಾರದ ಸಹಾಯಕ ಕಾರ್ಯಪಾಲಕ ಅಭಿಯಂತರರ ಪ್ರಕಟಣೆ ತಿಳಿಸಿದೆ.