ಇಸ್ತಾಂಬುಲ್: ಭಯೋತ್ಪಾದಕರ ಜೊತೆಗೆ ಸಂಪರ್ಕ ಇಟ್ಟುಕೊಂಡಿದ್ದಕ್ಕೆ ಮತ್ತು ಭ್ರಷ್ಟಾಚಾರದ ಆರೋಪದಡಿ ಇಸ್ತಾಂಬುಲ್ ನಗರದ ಮೇಯರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಮೇಯರ್ ಎಕ್ರೆಂ ಇಮಾಮೊಗ್ಲು ಅವರು ಟರ್ಕಿಯ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಅವರ ಬದ್ಧ ರಾಜಕೀಯ ವೈರಿ ಎಂದೂ ಗುರುತಿಸಿಕೊಂಡಿದ್ದಾರೆ.
'ಪೊಲೀಸರು ಇತರೆ 100 ಜನರಿಗೆ ವಾರಂಟ್ ಜಾರಿಮಾಡಿದ್ದಾರೆ. ನಗರದಲ್ಲಿ ನಾಲ್ಕು ದಿನ ಪ್ರತಿಭಟನೆ ನಿರ್ಬಂಧಿಸಲಾಗಿದೆ' ಎಂದು ಸ್ಥಳೀಯ ಸುದ್ದಿಸಂಸ್ಥೆ ವರದಿ ಮಾಡಿದೆ.
ಎರಡು ದಿನಗಳ ಹಿಂದೆ ಸ್ಥಳೀಯ ವಿಶ್ವವಿದ್ಯಾಲಯವು ಮೇಯರ್ ಅವರ ಡಿಪ್ಲೊಮಾ ಪದವಿಯನ್ನು ಅನೂರ್ಜಿತಗೊಳಿಸಿದ್ದು, ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಅನರ್ಹಗೊಂಡಿದ್ದರು.