ಕಾಸರಗೋಡು: ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಬಾಯಾರು ಪದವಿನಲ್ಲಿ 16ರ ಹರೆಯದ ಬಾಲಕಿ ಮುಂದೆ ನಗ್ನತೆ ಪ್ರಕಟಿಸಿದ್ದ ವಿಟ್ಲ ಸರೊಳಿ ಹೌಸ್ ನಿವಾಸಿ ಅಬ್ದುಲ್ ಹಕೀಂ ಎಂಬಾತನಿಗೆ ಕಾಸರಗೋಡು ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ರಾಮುರಮೇಶ್‍ಚಂದ್ರಭಾನು ಮೂರು ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 60ಸಾವಿರ ರೂ. ರೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ದಂಡ ಪಾವತಿಸದಿದ್ದಲ್ಲಿ ಅಪರಾಧಿ ಮೂರು ತಿಂಗಳ ಹೆಚ್ಚಿನ ಜೈಲು ಶಿಕ್ಷೆ ಅನುಭವಿಸುವಂತೆ ತೀರ್ಪಿನಲ್ಲಿ ತಿಳಿಸಲಾಗಿದೆ. 2019ರಲ್ಲಿ ಪೈವಳಿಕೆ ಪಂಚಾಯಿತಿಯ ಬಾಯಾರುಪದವಿನಲ್ಲಿ16ರ ಹರೆಯದ ಬಾಲಕಿ ಎದುರು ನಗ್ನಶರೀರ ಪ್ರದರ್ಶಿಸಿರುವ ಬಗ್ಗೆ ಮಂಜೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು.