ಕೊಲ್ಲಂ: ಕೇರಳದಲ್ಲಿ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿಯನ್ನಾಗಿ ಎಂ.ವಿ. ಗೋವಿಂದನ್ ಅವರನ್ನು ಆಯ್ಕೆ ಮಾಡಲಾಗಿದೆ. ಹಾಗೂ 17 ಜನ ಹೊಸಬರು ಇರುವ 89 ಸದಸ್ಯರ ರಾಜ್ಯ ಸಮಿತಿಯನ್ನು ಆಯ್ಕೆ ಮಾಡಲಾಗಿದೆ.
24ನೇ ಸಿಪಿಐ(ಎಂ) ರಾಜ್ಯ ಸಮ್ಮೇಳನದಲ್ಲಿ ಈ ಘೋಷಣೆ ಮಾಡಲಾಯಿತು.
ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಎಂ.ವಿ ಗೋವಿಂದನ್, ಜಯರಾಜನ್, ಹಣಕಾಸು ಸಚಿವ ಕೆ.ಎನ್. ಬಾಲಗೋಪಾಲ್, ಶೈಲಜಾ, ಥಾಮಸ್ ಐಸಾಕ್, ಕೈಗಾರಿಕಾ ಸಚಿವ ರಾಜೀವ್, ದೇವಸ್ವಂ, ಸಹಕಾರ ಮತ್ತು ಬಂದರು ಸಚಿವ ವಾಸವನ್, ಸಂಸ್ಕೃತಿ ಸಚಿವ ಸಾಜಿ ಚೇರಿಯನ್ ಸೇರಿದಂತೆ 17 ಸದಸ್ಯರ ರಾಜ್ಯ ಕಾರ್ಯಕಾರಿಣಿಯನ್ನು ರಚಿಸಲಾಗಿದೆ.
ಗೋವಿಂದನ್ ಅವರು ಕಣ್ಣೂರು ಜಿಲ್ಲೆಯವರು. ಈ ಹಿಂದೆ ಅವರು ಸಿಪಿಐ(ಎಂ) ರಾಜಕೀಯ ಕಾರ್ಯಕಾರಿಣಿ ಸದಸ್ಯರೂ ಆಗಿದ್ದಾರೆ.