ಕಾಸರಗೋಡು: ಪುನ:ಪ್ರತಿಷ್ಠಾ ಬ್ರಹ್ಮಕಲಶೋತ್ಸವ-ಮೂಡಪ್ಪ ಸೇವೆ ಸಂಭ್ರಮದಲ್ಲಿರುವ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಗೊನೆ ಮುಹೂರ್ತ ಶುಕ್ರವಾರ ನೆರವೇರಿತು. ದೇವಸ್ಥಾನದ ಮುಖ್ಯ ಅರ್ಚಕ ಶ್ರೀಕೃಷ್ಣ ಉಪಾಧ್ಯಯ ಅವರ ಪ್ರಾರ್ಥನೆಯೊಂದಿಗೆ ಗೊನೆ ಮುಹೂರ್ತ ನೆರವೇರಿಸಲಾಯಿತು.
ಈ ಸಂದರ್ಭ ದೇವಾಲಯದಲ್ಲಿ ನಡೆಯಲಿರುವ ಐದು ದಿವಸಗಳ ಉತ್ಸವದ ಅಮಗವಾಗಿ ಐದು ಬಾಳೆ ಗೊನೆಯನ್ನು ಕಡಿದು ದೇವಾಲಯ ವಠಾರದ ಶ್ರೀದೇವರ ಕೆರೆಯ ನೀರಲ್ಲಿ ಗೊನೆಯನ್ನು ಮುಳುಗಿಸಿ ಶ್ರೀ ದೇಗುಲದ ನಡೆಯಲ್ಲಿ ಇರಿಸಿ ಪ್ರಾರ್ಥಿಸಲಾಯಿತು.
ಮಾ. 27ರಿಂದ ಏ. 7ರ ವರೆಗೆ ಪುನ:ಪ್ರತಿಷ್ಠಾ ಬ್ರಹ್ಮಕಲಶ, ಮೂಡಪ್ಪಸೇವೆ, ವಾರ್ಷಿಕ ಜತ್ರಾ ಮಹೋತ್ಸವ ನಡೆಯಲಿರುವುದು. ದೇವಸ್ಥಾನದಲ್ಲಿ ಮಾ. 30ರಂದು ಪುನ:ಪ್ರತಿಷ್ಠೆ, ಏ. 2 ರಂದು ಬ್ರಹ್ಮಕಲಶೋತ್ಸವ, 5ರಂದು ಮೂಡಪ್ಪ ಸೇವೆ ನಡೆಯಲಿರುವುದು.