ಕಾಸರಗೋಡು: ಜಿಲ್ಲೆಯಲ್ಲಿ ಕುಡಿಯುವ ನೀರಿನ ತೀವ್ರ ಅಭಾವ ಎದುರಿಸುತ್ತಿರುವ ಗ್ರಾಮ ಪಂಚಾಯಿತಿ ಯಾ ನಗರಸಭೆ ವ್ಯಾಪ್ತಿಯಲ್ಲಿ ಕುಡಿಯುವ ನೀರು ವಿತರಣೆಗೆ ಪಂಚಾಯಿತಿ ಯಾ ನಗರಸಭೆಗಳು ನಿಯೋಜಿಸಿರುವ ಟ್ಯಾಂಕರ್ ಲಾರಿಗಳಿಗೆ ಜಿಪಿಎಸ್ ವ್ಯವಸ್ಥೆ ಅಳವಡಿಸಲಾಗುವುದು.
ಜಿಲ್ಲಾ ಕಛೇರಿ, ನಗರಸಭೆ ಮತ್ತು ಪಂಚಾಯಿತಿ ಮಟ್ಟದಲ್ಲಿ ಜಿಪಿಎಸ್ ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಸ್ಥಾಪಿಸಲು ಕೊಟೇಶನ್ ಆಹ್ವಾನಿಸಲಾಗಿದೆ. ಸಿವಿಲ್ ಸ್ಟೇಶನ್‍ನಲ್ಲಿರುವ ಸ್ಥಳೀಯಾಡಳಿತ ಇಲಾಖೆಯ ಜಂಟಿ ನಿರ್ದೇಶಕರ ಉಲ್ಲೇಖ ಪ್ರಕಾರ ಕೊಟೇಶನ್ ಮಾರ್ಚ್ 20 ರಂದು ಮಧ್ಯಾಹ್ನ 2 ಗಂಟೆಗೆ ಕಛೇರಿಯಲ್ಲಿ ಲಭ್ಯವಿರಬೇಕು. ಅಂದು ಮಧ್ಯಾಹ್ನ 3 ಗಂಟೆಗೆ ಕೊಟೇಶನ್ ತೆರೆಯಲಾಗುವುದು. ಈ ಬಗ್ಗೆ ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ(04994 255782, 255803)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.