ಕಾಸರಗೋಡು: ಚೀಮೇನಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಚೀಮೇನಿ ತೆರೆದ ಕಾರಾಗೃಹದ ಇಬ್ಬರು ಕೈದಿಗಳಿಂದ ಎರಡು ಮೊಬೈಲ್‍ಗಳನ್ನು ಜೈಲ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ತೆರೆದ ಕಾರಾಗೃಹದ ಹೊಸ ಬರಾಕ್‍ನ ನೆಟ್ ಗಾರ್ಡ್ ಅಧಿಕಾರಿ ಹಾಗೂ ಸಹಾಯಕ ಕಾರಾಗೃಹ ಅಧಿಕಾರಿ ನಡೆಸಿದ ಕಾರ್ಯಾಚರಣೆಯಲ್ಲಿ ಮೊಬೈಲ್ ಪತ್ತೆಹಚ್ಚಲಾಗಿದೆ. ಈ ಬಗ್ಗೆ ಚೀಮೇನಿ ಠಾಣೆ ಪೊಲೀಸರಿಗೆ ನೀಡಿದ ದೂರಿನನ್ವಯ ಜೈಲು ಶಿಕ್ಷೆ ಅನುಭವಿಸುತ್ತಿರುವ ಬಾಬು ಹಾಗೂ ಅರುಣ್‍ಫಿಲಿಪ್ ಎಂಬವರ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ. ಇಬ್ಬರೂ ಆರೋಪಿಗಳನ್ನು ಕಣ್ಣೂರಿನ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ. ಇವರಿಗೆ ಮೊಬೈಲ್ ಪೂರೈಸಿದವರು ಬಗ್ಗೆ ಅಧಿಕಾರಿಗಳು ತನಿಖೆ ಆರಂಭಿಸಿದ್ದರೆ.
ಚೀಮೇನಿ ತೆರೆದ ಕಾರಗೃಹದ ಕೈದಿಗಳಿಂದ ಎರಡು ಮೊಬೈಲ್ ವಶ-ಕೇಸು
0
ಮಾರ್ಚ್ 20, 2025