ಜೈಪುರ: 1687ರಲ್ಲಿ ಐಸಾಕ್ ನ್ಯೂಟನ್ ಪ್ರತಿಪಾದಿಸುವುದಕ್ಕಿಂತ ಮೊದಲೇ ಗುರುತ್ವಾಕರ್ಷಣ ನಿಯಮವನ್ನು ವೇದ ಪಠ್ಯಗಳಲ್ಲಿ ಉಲ್ಲೇಖಿಸಲಾಗಿತ್ತು ಎಂದು ರಾಜಸ್ಥಾನದ ರಾಜ್ಯಪಾಲ ಹರೀರೀಭಾವೂ ಬಾಗಡೆ ಬುಧವಾರ ಹೇಳಿದರು.
ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ (ಇಗ್ನೋ) ಜೈಪುರ ಪ್ರಾದೇಶಿಕ ಕೇಂದ್ರದಲ್ಲಿ ನಡೆದ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, 'ಭಾರತವು ಪ್ರಾಚೀನ ಕಾಲದಿಂದಲೂ ಜ್ಞಾನಕೇಂದ್ರವಾಗಿದೆ.
ನಳಂದ ವಿಶ್ವವಿದ್ಯಾಲಯವು ವಿಶ್ವದ ಅನೇಕ ಭಾಗಗಳ ವಿದ್ಯಾರ್ಥಿಗಳನ್ನು ಆಕರ್ಷಿಸಿತ್ತು. ನ್ಯೂಟನ್‌ಗಿಂತ ಮೊದಲೇ ವೇದಗಳಲ್ಲಿ ಗುರುತ್ವಾಕರ್ಷಣ ನಿಯಮವನ್ನು ಉಲ್ಲೇಖಿಸಲಾಗಿತ್ತು' ಎಂದು ಅಭಿಪ್ರಾಯಪಟ್ಟರು.