ಡೀರ್ ಅಲ್-ಬಲಾಹ್, ಗಾಜಾಪಟ್ಟಿ: ಪ್ಯಾಲೆಸ್ಟೀನಿಯನ್ನರು ಗಾಜಾ ಪಟ್ಟಿಯಿಂದ ಹೊರನಡೆಯಬೇಕು ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಯನ್ನು ಮುಸ್ಲಿಂ ರಾಷ್ಟ್ರಗಳ ವಿದೇಶಾಂಗ ಸಚಿವರು ಶನಿವಾರ ತಿರಸ್ಕರಿಸಿದ್ದಾರೆ.
ಪ್ಯಾಲೆಸ್ಟೀನಿಯನ್ನರ ಪುನರ್ವಸತಿ ಹಾಗೂ ಗಾಜಾ ಪಟ್ಟಿ ಮರುನಿರ್ಮಾಣಕ್ಕಾಗಿ ಸಮಿತಿಯೊಂದನ್ನು ರಚಿಸಬೇಕು ಎಂಬ ಯೋಜನೆಗೆ ಅವರು ಬೆಂಬಲ ಸೂಚಿಸಿದ್ದಾರೆ.
ಸೌದಿ ಅರೇಬಿಯಾದ ಜಿದ್ದಾ ನಗರದಲ್ಲಿ ನಡೆದ ಇಸ್ಲಾಮಿಕ ಸಹಕಾರ ಸಂಘಟನೆಯ(ಒಐಸಿ) ವಿಶೇಷ ಸಭೆಯಲ್ಲಿ ಪಾಲ್ಗೊಂಡಿದ್ದ ವಿದೇಶಾಂಗ ಸಚಿವರು ಈ ವಿಚಾರವಾಗಿ ಚರ್ಚಿಸಿ, ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಮುಸ್ಲಿಂ ಬಾಹುಳ್ಯದ 57 ದೇಶಗಳನ್ನು ಒಐಸಿ ಒಳಗೊಂಡಿದೆ.