ಕಾಸರಗೋಡು: ಕೇರಳದ ಕೆಲವೊಂದು ಜಿಲ್ಲೆಗಳಲ್ಲಿ ಸಾಮಾನ್ಯ ತಾಪಮಾನಕ್ಕಿಂತ 2ಡಿಗ್ರಿಯಿಂದ 3ಡಿಗ್ರಿ ವರೆಗೆ ಹೆಚ್ಚಳವಾಗುವ ಸಾಧ್ಯತೆಯಿರುವುದಾಗಿ ಕೇಂದ್ರ ಹವಾಮಾನ ಇಲಾಖೆ ತಿಳಿಸಿದೆ. ರಾಜ್ಯದಲ್ಲಿ ಹೆಚ್ಚಿನ ತಾಪಮಾನದ ವರದಿಯ ಹಿನ್ನೆಲೆಯಲ್ಲಿ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಪ್ರತ್ಯೇಕ ಸಊಚನೆಗಳನ್ನು ನೀಡಿದೆ.
ಹೆಚ್ಚಿನ ತಾಪಮಾನದಿಂದ ನಿರ್ಜಲೀಕರಣ ಮತ್ತು ಇನ್ನೂ ಹಲವು ಗಂಭೀರ ಸಮಸ್ಯೆ ತಲೆದೋರಲಿರುವ ಹಿನ್ನೆಲೆಯಲ್ಲಿ ದ್ರವಾಹಾರ ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವಂತೆ ಸೂಚಿಸಲಾಗಿದೆ.
ಬೆಳಿಗ್ಗೆ 11 ರಿಂದ ಮಧ್ಯಾಹ್ನ 3ರ ವರೆಗೆ ದೀರ್ಘಕಾಲದ ತನಕ ಸೂರ್ಯನ ಬೆಳಕಿಗೆ ಮೈಯೊಡ್ಡುವುದನ್ನು ತಪ್ಪಿಸಬೇಕು ಜತೆಗೆ ಸಾಕಷ್ಟು ದ್ರವಾಹಾರ ಸೇವಿಸಬೇಕು. ಬಾಯಾರಿಕೆ ಇಲ್ಲದಿದ್ದರೂ ನೀರು ಕುಡಿಯುವುದು, ಹಗಲಿನಲ್ಲಿ ಆಲ್ಕೋಹಾಲ್, ಕಾಫಿ, ಟೀ ಮತ್ತು ಕಾರ್ಬೊನೇಟೆಡ್ ತಂಪು ಪಾನೀಯಗಳಂತಹ ನಿರ್ಜಲೀಕರಣ ಪಾನೀಯಗಳನ್ನು ವರ್ಜಿಸುವುದು, ಸಡಿಲವಾದ, ತಿಳಿ ಬಣ್ಣದ ಹತ್ತಿ ಬಟ್ಟೆಗಳನ್ನು ಧರಿಸುವುದು, ಹೊರಗೆ ಹೋಗುವಾಗ ಪಾದರಕ್ಷೆಗಳನ್ನು ಧರಿಸುವುದರ ಜತೆಗೆ ಕೊಡೆ ಅಥವಾ ಟೋಪಿ ಬಳಸುವುದು, ಸಾಕಷ್ಟು ಪ್ರಮಾಣದಲ್ಲಿ ಹಣ್ಣು, ತರಕಾರಿ ಸೇವಿಸುವುದು, ಮಾರುಕಟ್ಟೆ, ನಿರ್ಮಾಣಹಂತದ ಕಟ್ಟಡಗಳು, ತ್ಯಾಜ್ಯ ಸಂಗ್ರಹಣಾ ಕೇಂದ್ರಗಳಲ್ಲಿ (ಡಂಪಿಂಗ್ ಯಾರ್ಡ್) ಏಕಾಏಕಿ ಬೆಂಕಿ ಹರಡುವ ಸಾಧ್ಯತೆ ಹೆಚ್ಚಾಗಿದ್ದು, ಈ ಬಗ್ಗೆ ಮುಂಜಾಗ್ರತೆ ವಹಿಸುವುದರ ಜತೆಗೆ ಅಗ್ನಿಶಾಮಕ ತಪಾಸಣೆ ನಡೆಸುವಂತೆ ಸೂಚಿಸಲಾಗಿದೆ.
ಪತ್ರಕರ್ತರು ಮತ್ತು ಪೆÇಲೀಸ್ ಇಲಾಖೆಯಲ್ಲಿ ಕೆಲಸ ನಿರ್ವಹಿಸುವವರು ಬೆಳಿಗ್ಗೆ 11 ರಿಂದ ಮಧ್ಯಾಹ್ನ 3ರ ವರೆಗೆ ಛತ್ರಿಗಳನ್ನು ಬಳಸುವ ಮೂಲಕ ನೇರ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದನ್ನು ತಪ್ಪಿಸಬೇಕು. ನಿರ್ಜಲೀಕರಣವನ್ನು ತಡೆಗಟ್ಟಲು ಕರ್ತವ್ಯದಲ್ಲಿರುವ ಸಿಬ್ಬಂದಿಗೆ ಕುಡಿಯುವ ನೀರನ್ನು ಒದಗಿಸಿ ದಾಹ ತಣಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆಯೂ ಸೂಚಿಸಲಾಗಿದೆ.