ಉಪ್ಪಳ: ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿಯಾಗಿ 6 ವರ್ಷಗಳಿಂದ ಸೇವೆ ಸಲ್ಲಿಸಿ ಇದೀಗ ಕಾಸರಗೋಡು ಜಿಲ್ಲಾ ವಿದ್ಯಾಧಿಕಾರಿಯಾಗಿರುವ ದಿನೇಶ ವಿ ಅವರು ಸೇವೆ ಸಲ್ಲಿಸುತ್ತಿದ್ದು ಪ್ರಸ್ತುತ ವರ್ಷ ನಿವೃತ್ತಿಗೊಳ್ಳಲಿದ್ದಾರೆ. ಅವರನ್ನು ಜಿ.ಎಲ್.ಪಿ ಶಾಲೆ ಮುಳಿಂಜ ವಿದ್ಯಾ ಸಂಸ್ಥೆಯ ವತಿಯಿಂದ ಸೋಮವಾರ ಗೌರವಿಲಾಯಿತು.
ಮುಖ್ಯ ಶಿಕ್ಷಕಿ ಚಿತ್ರಾವತಿ ಚಿಗುರುಪಾದೆ ಮತ್ತು ಶಿಕ್ಷಕ ವೃಂದ, ಪಿ.ಟಿ.ಎ ಗಣ್ಯರ ಸಮಕ್ಷಮದಲ್ಲಿ ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಿತು. ಪಿ.ಟಿ.ಎ ಅಧ್ಯಕ್ಷ ಇಬ್ರಾಹಿಂ ಹನೀಫಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದ ಜೊತೆಗೆ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಮಂಗಲ್ಪಾಡಿ ಗ್ರಾಮ ಪಂಚಾಯತಿ ಮಾಜಿ ಸದಸ್ಯೆ ಮತ್ತು ಶಾಲಾ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆ ಸುಜಾತ ಶೆಟ್ಟಿ, ಮಂಜೇಶ್ವರ ಬಿ.ಆರ್.ಸಿಯ ತರಬೇತುದಾರ ಸುಮಯ್ಯ, ಆಶಾ ಕಾರ್ಯಕರ್ತೆ ವಿನುತ ಕುಮಾರಿ ಮತ್ತು ಹಿರಿಯ ಶಿಕ್ಷಕ ರಿಯಾಜ್ ಪೆರಿಂಗಡಿ ಉಪಸ್ಥಿತರಿದ್ದು ಶುಭ ಹಾರೈಸಿದರು. ಪ್ರಸ್ತುತ ವರ್ಷ ಬೀಳ್ಕೊಳ್ಳುತ್ತಿರುವ ಪ್ರತಿಯೊಂದು ವಿಧ್ಯಾರ್ಥಿಗಳಿಗೆ ಪೋಟೋ ಫ್ರೇಮ್ ನೀಡಿ ಗೌರವ ಕಿರೀಟ ತೊಡಿಸಿ ಬೀಳ್ಕೊಡಲಾಯಿತು. ಶಾಲಾ ಶಿಕ್ಷಕಿ ಧನ್ಯ ವಿರಮಿಸುತ್ತಿರುವ ವಿದ್ಯಾರ್ಥಿಗಳಿಗೆ ಹಿತವಚನ ನೀಡಿದರು. ಮುಖ್ಯಶಿಕ್ಷಕಿ ಚಿತ್ರಾವತಿ ಚಿಗುರುಪಾದೆ ಸ್ವಾಗತಿಸಿ, ಫಾತಿಮತ್ ಫಸೀನ ವಂದಿಸಿದರು. ಅಬ್ದುಲ್ ಬಶೀರ್ ಸುಬ್ಬಯ್ಯಕಟ್ಟೆ ನಿರ್ವಹಿಸಿದರು.