ಕಾಸರಗೋಡು: ಎನ್‍ಜಿಓ ಸಂಘದ 40ನೇ ಜಿಲ್ಲಾ ಸಮ್ಮೇಳನದ ಅಂಗವಾಗಿ ಜಿಲ್ಲಾ ಪರಿಷತ್ತು ಸಭೆ ಕಸರಗೋಡು ಕರಂದಕ್ಕಾಡಿನ ಎನ್‍ಜಿಓ ಸಂಘದ ಸಭಾಂಗಣದಲ್ಲಿ ಜರಗಿತು. ಎನ್‍ಜಿಒ ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯ ಪಿ.ಪೀತಾಂಬರನ್ ಉದ್ಘಾಟಿಸಿದರು. ಜಿಲ್ಲಾ ಸಮಿತಿ ಅಧ್ಯಕ್ಷ ಕೆ. ರಂಜಿತ್ ಅದ್ಯಕ್ಷತೆ ವಹಿಸಿದ್ದರು.
ನಾಲ್ಕು ವರ್ಷಗಳ ಹಿಂದೆಯೇ ಮಂಜೂರು ಮಾಡಬೇಕಿದ್ದ ಕ್ಷಾಮ ಭತ್ತೆಯ ಒಂದು ಕಂತು ಮಂಜೂರು ಮಾಡಿದ ನಂತರ, ಅದರ ಹಿಂದಿನ ಸವಲತ್ತುಗಳನ್ನು ಕಸಿದುಕೊಮಡಿರುವ ಸರ್ಕಾರದ ಧೋರಣೆ ಖಂಡನೀಯವಾದದು ಎಂದು ಸಭೆ ಅಭಿಪ್ರಾಯಪಟ್ಟಿತು. ಪ್ರತಿ ತಿಂಗಳಿನಂತೆ 117 ತಿಂಗಳ ಕಾಲ ನೀಡಬೇಕಾದ ಬಾಕಿಮೊತ್ತ ನೀಡಲು ಸರ್ಕಾರ ನಿರಾಕರಿಸಿದೆ. ಈ ನಿಟ್ಟಿನಲ್ಲಿ 35ಸಾವಿರ ಕೋಟಿ ರೂ. ಮೊತ್ತವನ್ನು ಸರ್ಕಾರ ಬಾಕಿಯಿರಿಸಿಕೊಂಡಿದೆ.
2024ರ ಏಪ್ರಿಲ್-ಅಕ್ಟೋಬರ್ ಹಾಗೂ 2025ರಲ್ಲಿನ ಬಾಕಿಯಿರಿಸಿಕೊಂಡಿರುವ ತುಟ್ಟಿಭತ್ತೆಯನ್ನು ತಕ್ಷಣ ನೀಡಲು ಸರ್ಕಾರ ಮುಂದಗುವಂತೆ ಸಭೆ ಆಗ್ರಹಿಸಿತು. ಜಿಲ್ಲಾ ಕಾರ್ಯದರ್ಶಿ ವಿ.ಶ್ಯಾಮ್ ಪ್ರಸಾದ್ ವರದಿ ಹಾಗೂ ಕೋಶಾಧಿಕಾರಿ ರವಿಕುಮಾರ್ ಲೆಕ್ಕಪತ್ರ ಮಂಡಿಸಿದರು. ಸುನೀಲ್ ಪಿ.ಸಿ ಸ್ವಾಗತಿಸಿದರು. ಅಭಿಲಾಷ್ ಕಾರ್ತಿಕ ವಂದಿಸಿದರು.