ಜೆರುಸಲೇಂ: ಮುಸ್ಲಿಮರ ಪವಿತ್ರ ತಿಂಗಳು ರಂಜಾನ್ ಹಾಗೂ ಏಪ್ರಿಲ್ ತಿಂಗಳ ಮಧ್ಯದಲ್ಲಿ ಬರುವ ಯಹೂದಿಗಳ ಪ್ರವಿತ್ರ ದಿನಗಳಲ್ಲಿ (ಪೆಸಾಕ್) ಗಾಜಾದಲ್ಲಿ ಕದನ ವಿರಾಮ ವಿಸ್ತರಿಸುವ ಅಮೆರಿಕದ ಪ್ರಸ್ತಾವನೆಗೆ ಇಸ್ರೇಲ್ ಒಪ್ಪಿದೆ ಎಂದು ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರ ಕಚೇರಿ ಭಾನುವಾರ ಪ್ರಕಟಣೆಯಲ್ಲಿ ತಿಳಿಸಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ಮಧ್ಯಪ್ರಾಚ್ಯದ ದೂತ ಸ್ಟೀವ್ ವಿಟ್‌ಕಾಫ್ ಮೂಲಕ ಕಳುಹಿಸಿದ ಪ್ರಸ್ತಾವನೆಯನ್ನು ಇಸ್ರೇಲ್ ಒಪ್ಪಿದೆ ಎಂದು ನೇತನ್ಯಾಹು ಕಚೇರಿ ಪ್ರಕಟಣೆ ಹೇಳಿದೆ.
ಮಾರ್ಚ್ ಅಂತ್ಯದಲ್ಲಿ ಕೊನೆಗೊಳ್ಳಲಿರುವ ರಂಜಾನ್ ಹಾಗೂ ಏಪ್ರಿಲ್ ತಿಂಗಳ ಮಧ್ಯದಲ್ಲಿ ಆಚರಿಸಲಾಗುವ ಪೆಸಾಕ್‌ನ 8 ದಿನಗಳ ಅವಧಿಗಳಿಗೆ ತಾತ್ಕಾಲಿಕ ಕದನ ವಿರಾಮಕ್ಕಾಗಿ ಅಮೆರಿಕ ಅಧ್ಯಕ್ಷರ ರಾಯಭಾರಿ ಸ್ಟೀವ್ ವಿಟ್‌ಕಾಫ್ ಅವರ ಯೋಜನೆಯನ್ನು ಇಸ್ರೇಲ್ ಒಪ್ಪಿಕೊಂಡಿದೆ ಎಂದು ಅದು ತಿಳಿಸಿದೆ.
ಜ. 19ರಂದು ಜಾರಿಗೆ ಬಂದಿದ್ದ ಮೊದಲ ಹಂತದ ಕದನ ವಿರಾಮ ಮಾ.1ರಂದು ಅಂತ್ಯಗೊಂಡಿತ್ತು. ಎರಡನೇ ಹಂತದ ಕದನ ವಿರಾಮ ಮಾತುಕತೆ ಜಾರಿಯಲ್ಲಿದೆ.