ಸೋಲ್ (ಎಪಿ): ದಕ್ಷಿಣ ಕೊರಿಯಾದ ಹಲವೆಡೆ ಕಾಳ್ಗಿಚ್ಚು ವ್ಯಾಪಕವಾಗಿ ಹಬ್ಬಿರುವ ಕಾರಣ ಅಂಡಾಂಗ್ ನಗರದ ನಿವಾಸಿಗಳು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳುವಂತೆ ಅಲ್ಲಿನ ಅಧಿಕಾರಿಗಳು ಸೂಚಿಸಿದ್ದಾರೆ.
ಕಾಳ್ಗಿಚ್ಚು ನಂದಿಸಲು ವಾರದಿಂದ ಅಗ್ನಿಶಾಮಕ ಪಡೆಯು ಹರಸಾಹಸಪಡುತ್ತಿದ್ದು, ಮಂಗಳವಾರ ಅಪರಾಹ್ನ ವೇಳೆ 9 ಸ್ಥಳಗಳಲ್ಲಿ ಬೆಂಕಿ ನಂದಿಸುವ ಕಾರ್ಯ ನಡೆದಿದೆ.
ಕಳೆದ 5 ದಿನಗಳಲ್ಲಿ 36,300 ಎಕರೆ ಭೂಮಿಯಲ್ಲಿ ಬೆಂಕಿ ಆವರಿಸಿದ್ದು, ಸಾವಿರಾರು ಜನರನ್ನು ಸ್ಥಳಾಂತರಿಸಲಾಗಿದೆ. 1,300 ವರ್ಷ ಹಳೆಯದಾದ ಬೌದ್ಧ ಮಂದಿರ ಸೇರಿದಂತೆ ಹಲವು ಕಟ್ಟಡಗಳು ಬೆಂಕಿಗಾಹುತಿಯಾಗಿವೆ.