HEALTH TIPS

ಟ್ರಂಪ್ ಜತೆ ಜಟಾಪಟಿ: ಸಭೆಯಿಂದ ಹೊರನಡೆದು ಅಮೆರಿಕಕ್ಕೆ ಧನ್ಯವಾದ ಎಂದ ಝೆಲೆನ್‌ಸ್ಕಿ

ನ್ಯೂಯಾರ್ಕ್/ವಾಷಿಂಗ್ಟನ್: ಅಮೆರಿಕ -ಉಕ್ರೇನ್‌ ನಡುವಿನ ಖನಿಜ ಒಪ್ಪಂದ ಕುರಿತಾದ ಮಾತುಕತೆಯ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಉಪಾಧ್ಯಕ್ಷ ಜೆ.ಡಿ .ವ್ಯಾನ್ಸ್ ಹಾಗೂ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ನಡುವೆ ಜಟಾಪಟಿ ನಡೆದಿದೆ.

ಖನಿಜ ಒಪ್ಪಂದ ವಿಚಾರವಾಗಿ ಓವಲ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ರಷ್ಯಾ, ಉಕ್ರೇನ್​​ ಯುದ್ಧ ವಿಚಾರವನ್ನು ಪ್ರಸ್ತಾಪಿಸಲಾಗಿದ್ದು, ಈ ವೇಳೆ ಉಭಯ ನಾಯಕರ ನಡುವೆ ತೀವ್ರ ವಾಗ್ವಾದ ನಡೆದಿದೆ.

ಖನಿಜ ಒಪ್ಪಂದಕ್ಕೆ ಸಹಿ ಹಾಕದೆಯೇ ಝೆಲೆನ್‌ಸ್ಕಿ ಅವರು ಕೂಡಲೇ ಸಭೆಯಿಂದ ಹೊರನಡೆದಿದ್ದಾರೆ.

ಶ್ವೇತಭವನದಿಂದ ನಿರ್ಗಮಿಸಿದ ಕೆಲವೇ ನಿಮಿಷಗಳಲ್ಲಿ 'ಎಕ್ಸ್‌'ನಲ್ಲಿ ಪೋಸ್ಟ್ ಮಾಡಿರುವ ಝೆಲೆನ್‌ಸ್ಕಿ, 'ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉಪಾಧ್ಯಕ್ಷ ಜೆ.ಡಿ .ವ್ಯಾನ್ಸ್ ಅವರೊಂದಿಗೆ ನಡೆದ ಸಭೆ ಅಭೂತಪೂರ್ವವಾಗಿತ್ತು. ಡೊನಾಲ್ಡ್ ಟ್ರಂಪ್ ಮತ್ತು ಉಕ್ರೇನ್‌ಗೆ ನೀಡಿದ ಬೆಂಬಲಕ್ಕಾಗಿ ಅಮೆರಿಕದ ಜನತೆಗೆ ಧನ್ಯವಾದ. ಉಕ್ರೇನ್‌ಗೆ ಶಾಶ್ವತವಾದ ಶಾಂತಿ ಬೇಕಾಗಿದೆ. ಅದಕ್ಕಾಗಿ ನಾವು ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ' ಎಂದು ತಿಳಿಸಿದ್ದಾರೆ.

ಝೆಲೆನ್‌ಸ್ಕಿ-ಟ್ರಂಪ್ ಜಟಾಪಟಿ

ರಷ್ಯಾ, ಉಕ್ರೇನ್ ಯುದ್ಧದಲ್ಲಿ ಝೆಲೆನ್‌ಸ್ಕಿ ಚೆಲ್ಲಾಟ ಆಡುತ್ತಿದ್ದಾರೆ. ಉಕ್ರೇನ್ ಜನರ ಜೀವದ ಜೊತೆ ಆಟವಾಡುತ್ತಿದ್ದೀರಿ... 3ನೇ ಮಹಾಯುದ್ಧದ ಜೊತೆಯೂ ಆಟವಾಡುತ್ತಿದ್ದೀರಿ ಎಂದು ಝೆಲೆನ್‌ಸ್ಕಿ ವಿರುದ್ಧ ಟ್ರಂಪ್ ಕಿಡಿಕಾರಿದ್ದಾರೆ.

ಇಷ್ಟು ವರ್ಷಗಳ ಕಾಲ ನಿಮ್ಮ (ಉಕ್ರೇನ್) ಜೊತೆಗೆ ಅಮೆರಿಕ ಬೆಂಬಲವಾಗಿ ನಿಂತಿದೆ. ಯಾರು ಏನೇ ಹೇಳಿದರೂ ನಿಮಗೆ ಅಮೆರಿಕ ಸಹಾಯ ಮಾಡಿದೆ. ಆದರೆ, ನೀವು ಅಮೆರಿಕ ಜನರಿಗೆ ಅವಮಾನ ಮಾಡುವ ಕೆಲಸ ಮಾಡ್ತಿದ್ದೀರಿ. ನಾವು ಯುದ್ಧವನ್ನು ನಿಲ್ಲಿಸಲು ಸಾಕಷ್ಟು ಬಾರಿ ಮನವಿ ಮಾಡಿದ್ದೇವೆ. ಆದರೆ, ನೀವು ಕದನ ವಿರಾಮಕ್ಕೆ ಒಪ್ಪದೆ ವಿತಂಡವಾದ ಮಾಡಿದ್ದೀರಿ. ನಾವು ಸಾವು ತಡೆಗೆ ಯತ್ನಿಸಿದರೆ ನೀವು ಹೆಣ ನೋಡಲು ಹೋಗುತ್ತೀರಿ ಎಂದು ಝೆಲೆನ್‌ಸ್ಕಿ ವಿರುದ್ಧ ಟ್ರಂಪ್ ಬೇಸರ ಹೊರಹಾಕಿದ್ದಾರೆ.

ಟ್ರಂಪ್ ಹೇಳಿಕೆಗೆ ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಕೂಡ ಕೆಂಡಾಮಂಡಲರಾಗಿದ್ದಾರೆ. 'ನಾವು ಯಾವುದೇ ದೇಶದ ವ್ಯಾಪ್ತಿಗೆ ಒಳಪಟ್ಟಿಲ್ಲ. ನಾವು ಯಾರ ಮೇಲೂ ದಾಳಿ ಮಾಡಲಿಲ್ಲ. ರಷ್ಯಾದವರೇ ನಮ್ಮ ಮೇಲೆ ದಾಳಿ ಮಾಡಿದ್ದು ಎಂದು ಗುಡುಗಿದ್ದಾರೆ.

ಖನಿಜ ಒಪ್ಪಂದಕ್ಕೆ ಸಹಿ ಹಾಕಿಲ್ಲ: ಶ್ವೇತಭವನ ಸ್ಪಷ್ಟನೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರು ಖನಿಜ ಒಪ್ಪಂದಕ್ಕೆ ಸಹಿ ಹಾಕಿಲ್ಲ ಎಂದು ಶ್ವೇತಭವನದ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.

ಖನಿಜ ಒಪ್ಪಂದವನ್ನು ಟ್ರಂಪ್ ಅವರು ತಳ್ಳಿಹಾಕಿಲ್ಲ. ಆದರೆ, ಉಕ್ರೇನ್ ರಚನಾತ್ಮಕ ಮಾತುಕತೆಗೆ ಸಿದ್ಧವಾಗುವವರೆಗೆ ಇದು ಸಾಧ್ಯವಾಗುವುದಿಲ್ಲ. ಟ್ರಂಪ್-ಝೆಲೆನ್‌ಸ್ಕಿ ನಡುವೆ ರದ್ದುಗೊಂಡ ಜಂಟಿ ಸುದ್ದಿಗೋಷ್ಠಿಯನ್ನು ಮರುಹೊಂದಿಸಬಹುದೇ ಎಂಬುದು ಉಕ್ರೇನಿಯನ್ನರಿಗೆ ಬಿಟ್ಟದ್ದು ಎಂದು ಅಧಿಕಾರಿ ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries