ಪ್ಯಾರಿಸ್: ಉಕ್ರೇನ್‌ಗೆ ಸೇನಾ ಗುಪ್ತಚರ ನೆರವು ನೀಡಲು ಫ್ರಾನ್ಸ್ ನಿರ್ಧರಿಸಿದೆ ಎಂದು ಇಲ್ಲಿನ ರಕ್ಷಣಾ ಸಚಿವ ಸೆಬಾಸ್ಟಿಯೆನ್ ಲುಕೊರ್ನು ತಿಳಿಸಿದ್ದಾರೆ. ಸೇನೆಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಹಂಚಿಕೊಳ್ಳಲು ಅಮೆರಿಕ ನಿರಾಕರಿಸಿದ ಬೆನ್ನಲ್ಲೇ, ಫ್ರಾನ್ಸ್ ಈ ನಿರ್ಧಾರ ಕೈಗೊಂಡಿದೆ.
ರಷ್ಯಾ ವಿರುದ್ಧ ಸಮರದಲ್ಲಿ ಅಮೆರಿಕ ಒದಗಿಸುತ್ತಿದ್ದ ಪ್ರಮುಖ ಗುಪ್ತಚರ ಮಾಹಿತಿಯು ಉಕ್ರೇನ್ ಸೇನಾ ಕಾರ್ಯಾಚರಣೆ ನಡೆಸಲು ನೆರವಾಗುತ್ತಿತ್ತು. ಬುಧವಾರದಿಂದ ತಾತ್ಕಾಲಿಕವಾಗಿ ಈ ಮಾಹಿತಿ ಹಂಚಿಕೆಯನ್ನು ಸ್ಥಗಿತಗೊಳಿಸಲಾಗಿದೆ. ವಾಷಿಂಗ್ಟನ್ ಹಾಗೂ ಕೀವ್ ನಡುವೆ ಧನಾತ್ಮಕವಾದ ಮಾತುಕತೆ ನಡೆಯುತ್ತಿದ್ದು, ತಾತ್ಕಾಲಿಕವಾಗಿ ಮಾಹಿತಿ ಹಂಚಿಕೆಯನ್ನು ಸ್ಥಗಿತಗೊಳಿಸಲಾಗಿದೆ' ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ.
ರಷ್ಯನ್ ಸೇನೆಯ ಚಲನವಲನ ತಿಳಿಯಲು ಅಮೆರಿಕ ಒದಗಿಸುತ್ತಿದ್ದ ಮಾಹಿತಿಯೇ ಉಕ್ರೇನ್‌ಗೆ ಹೆಚ್ಚು ನೆರವಾಗುತ್ತಿತ್ತು.
'ಫ್ರಾನ್ಸ್ ಮುಂದೆಯೂ ಗುಪ್ತಚರ ಮಾಹಿತಿ ಹಂಚಿಕೊಳ್ಳಲಿದೆ. ನಮ್ಮ ಗುಪ್ತಚರ ವ್ಯವಸ್ಥೆಯು ಅತ್ಯುತ್ತಮವಾಗಿದ್ದು,ಇದರಿಂದ ಉಕ್ರೇನ್ ಲಾಭ ಪಡೆಯಲು ಅವಕಾಶ ಮಾಡಿಕೊಡಲಾಗುವುದು' ಎಂದು ಲುಕೊರ್ನು ತಿಳಿಸಿದರು.