ಪೆರ್ಲ: ಪೆರ್ಲ ನಾಲಂದ ಕಾಲೇಜು, ನಾಲಂದ ಚಾರಿಟೇಬಲ್ ಟ್ರಸ್ಟ್ ಹಾಗೂ ಐಕ್ಯೂಎಸಿ ಆಶ್ರಯದಲ್ಲಿ "ತರಂಗ್ 2ಕೆ 25" ಕಾಲೇಜು ವಾರ್ಷಿಕೋತ್ಸವ ನಡೆಯಿತು.
ಮಲಪ್ಪುರಂ ಮುಂಡುಪರಂಬ ರೀಜನಲ್ ಸಯನ್ಸ್ ಅಂಡ್ ಹ್ಯುಮಾನಿಟೀಸ್ ಕಾಲೇಜು ಇಂಗ್ಲಿಷ್ ವಿಭಾಗದ ಮುಖ್ಯಸ್ಥ, ಪತ್ರಿಕೋದ್ಯಮ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರಣವ್ ಕೆ.ಭಟ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಯ ಜೀವನದಲ್ಲಿ ಗುರು ಪ್ರಧಾನ ಪಾತ್ರ ನಿರ್ವಹಿಸುತ್ತಾನೆ. ಗುರುವಿನ ಮಾರ್ಗದರ್ಶನ ವಿದ್ಯಾರ್ಥಿಯ ಜೀವನದ ದಾರಿದೀಪವಾಗುವುದು ಎಂದರು.
ಕಾಲೇಜು ಪ್ರಾಂಶುಪಾಲ ಶಂಕರ ಖಂಡಿಗೆ ಅಧ್ಯಕ್ಷತೆ ವಹಿಸಿದ್ದರು. ನಾಲಂದ ಕಾಲೇಜು ಆಡಳಿತ ಮಂಡಳಿ ಸದಸ್ಯ ಕೋಳಾರು ಸತೀಶ್ಚಂದ್ರ ಭಂಡಾರಿ ಹಾಗೂ ರಾಜಶೇಖರ್ ಪೆರ್ಲ ಉಪಸ್ಥಿತರಿದ್ದರು.
ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಗೌರವ ಧನ ವಿತರಿಸಿ ಅಭಿನಂದಿಸಲಾಯಿತು. ಇಂಗ್ಲಿಷ್ ವಿಭಾಗದ ಉಪನ್ಯಾಸಕಿ, ವಿದ್ಯಾರ್ಥಿ ಕ್ಷೇಮ ಪಾಲಕಿ ಶಿಲ್ಪ ಪಿ.ಸ್ವಾಗತಿಸಿ, ಮಲಯಾಳಂ ವಿಭಾಗದ ಉಪನ್ಯಾಸಕಿ ವಿನೀಶ ವಂದಿಸಿದರು. ಆಡಳಿತ ವಿಭಾಗದ ಮುಖ್ಯಸ್ಥೆ ನಿಶ್ಮಿತಾ ನಿರೂಪಿಸಿದರು. ಕಾಸರಗೋಡು "ಸ್ಪಾರ್ಕ್" ಗುಂಪಿನಿಂದ ವಯಲಿನ್ ವಾದನ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು.