HEALTH TIPS

ಕುಂಡಂಗುಳಿಯ ಸಾವಿತ್ರಿ ಭಾಯಿ ಫುಲೆ ಸ್ಮಾರಕ ವಸತಿ ಶಾಲೆಯಲ್ಲಿ ಪ್ರವೇಶಾತಿ

Top Post Ad

Click to join Samarasasudhi Official Whatsapp Group

Qries

ಕಾಸರಗೋಡು: ಪರಿಶಿಷ್ಟ ವರ್ಗ ಅಭಿವೃದ್ಧಿ ಇಲಾಖೆ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಕುಂಡಂಗುಳಿಯ ಸಾವಿತ್ರಿ ಭಾಯಿ ಫುಲೆ ಸ್ಮಾರಕ ವಸತಿ ಶಾಲೆಯಲ್ಲಿ 2025-26 ನೇ ಸಾಲಿನ ಶೈಕ್ಷಣಿಕ ವರ್ಷದ(ಇಂಗ್ಲಿಷ್ ಮಾಧ್ಯಮ, ರಾಜ್ಯ ಪಠ್ಯಕ್ರಮ) ಒಂದರಿಂದ ಎಂಟನೇ ತರಗತಿ ವರೆಗೆ ನಿಗದಿಪಡಿಸಿರುವ ವಿವಿಧ ಸೀಟುಗಳ ಪ್ರವೇಶಾತಿಗಾಗಿ ಕೊರಗ ಸಮುದಯದ ಮಕ್ಕಳಿಗೆ ಆದ್ಯತೆ ನೀಡಿ ಅರ್ಜಿ ಆಹ್ವಾನಿಸಲಾಗಿದೆ. 

ಆದಾಯ ಮಿತಿಯು 2 ಲಕ್ಷ ರೂ ಮೀರಬಾರದು. ಮಕ್ಕಳ ಪೆÇೀಷಕರು ಕೇಂದ್ರ ಮತ್ತು ರಾಜ್ಯ ಸಾರ್ವಜನಿಕ ವಲಯದ ಸಂಸ್ಥೆಗಳ ಉದ್ಯೋಗಿಗಳಲ್ಲ ಎಂದು ಖಚಿತಪಡಿಸುವ ಪ್ರಮಾಣಪತ್ರವನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು. ವಸತಿಗೃಹದಲ್ಲಿ ವಾಸ್ತವ್ಯಹೂಡಿ ಅಧ್ಯಯನ ಮಾಡಲು ಆಸಕ್ತಿ ಇರುವ  ಪರಿಶಿಷ್ಟ ವರ್ಗ ವಿಭಾಗದ ವಿದ್ಯಾರ್ಥಿಗಳು-ಪೆÇೀಷಕರು ಮೇ 25ರ ವರೆಗೆ ಶಾಲೆಗೆ ಭೇಟಿ ನೀಡಿ ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಜನನ ಪ್ರಮಾಣ ಪತ್ರ ಹಾಗೂ ವೈದ್ಯಕೀಯ ಪ್ರಮಾಣ ಪತ್ರದೊಂದಿಗೆ ಅರ್ಜಿ ಸಲ್ಲಿಸಬೇಕು. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿದೂರವಾಣಿ ಸಂಖ್ಯೆ(04994 210922, 9497297325)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.



Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries