ತಿರುವನಂತಪುರಂ: ವಿಶ್ವ ಜಲ ದಿನಾಚರಣೆಯಂಗವಾಗಿ ಹಸಿರು ಕೇರಳಂ ಮಿಷನ್ ಆಯೋಜಿಸಿರುವ ಎರಡು ದಿನಗಳ ಪರಿಸರ ಸಮ್ಮೇಳನವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇಂದು ತಿರುವನಂತಪುರಂನಲ್ಲಿ ಉದ್ಘಾಟಿಸಲಿದ್ದಾರೆ.
ಮುಖ್ಯಮಂತ್ರಿಗಳು ನವ ಕೇರಳಕ್ಕಾಗಿ ಜಲ ಭದ್ರತಾ ವಿಧಾನ ದಾಖಲೆಯನ್ನು ಬಿಡುಗಡೆ ಮಾಡಲಿದ್ದಾರೆ. ಇಂದು ಸಂಜೆ 5.30 ಕ್ಕೆ ತಿರುವನಂತಪುರದ ಟ್ಯಾಗೋರ್ ರಂಗಮಂದಿರದಲ್ಲಿ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಸ್ಥಳೀಯಾಡಳಿತ ಸಚಿವ ಎಂ. ಬಿ. ರಾಜೇಶ್ ಅಧ್ಯಕ್ಷತೆ ವಹಿಸುವರು.
ಜಲ ಸುರಕ್ಷತೆ, ಪರಿಸರ ಪುನಃಸ್ಥಾಪನೆ ಮತ್ತು ತ್ಯಾಜ್ಯ ನಿರ್ವಹಣೆಯ ಕ್ಷೇತ್ರಗಳಲ್ಲಿ ಹಸಿರು ಕೇರಳಂ ಮಿಷನ್ ನೇತೃತ್ವದಲ್ಲಿ ಸ್ಥಳೀಯಾಡಳಿತ ಮಟ್ಟದಲ್ಲಿ ಕೈಗೊಳ್ಳಲಾದ ಅತ್ಯುತ್ತಮ ಕ್ರಮಗಳನ್ನು ಗುರುತಿಸಿ ಪ್ರದರ್ಶಿಸಲು ಈ ಸಮ್ಮೇಳನವನ್ನು ಆಯೋಜಿಸಲಾಗಿದೆ.
ಸಾರ್ವಜನಿಕ ಶಿಕ್ಷಣ ಸಚಿವ ವಿ.ಶಿವನ್ ಕುಟ್ಟಿ ಪರಿಸರ ಪುನಃಸ್ಥಾಪನೆ ಚಟುವಟಿಕೆಗಳಲ್ಲಿ ಗಮನಾರ್ಹ ಸಾಧನೆ ತೋರಿದ ಇಲಾಖೆಗಳು ಮತ್ತು ಸಂಸ್ಥೆಗಳನ್ನು ಸನ್ಮಾನಿಸಲಿದ್ದಾರೆ.
‘ನೆಟ್‍ಝೀರೋ ಕಾರ್ಬನ್ ಕೇರಳ ಥ್ರೂ ದಿ ಪೀಪಲ್’ ಮೊಬೈಲ್ ಅಪ್ಲಿಕೇಶನ್ ಬಿಡುಗಡೆ ಮತ್ತು ಅಭಿಯಾನ ಮಾರ್ಗಸೂಚಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಹಣಕಾಸು ಸಚಿವ ಕೆ. ಎನ್. ಬಾಲಗೋಪಾಲ್ ನಿರ್ವಹಿಸಲಿದ್ದಾರೆ.
ಜಲಸಂಪನ್ಮೂಲ ಸಚಿವೆ ರೋಶಿ ಅಗಸ್ಟೀನ್ ಅವರು 'ಹೊಸ ಕೇರಳದ ಪರಿಸರ ಶ್ರೇಷ್ಠತೆಗಳು' ಎಂಬ ಪ್ರಬಂಧ ಸಂಕಲನ ಮತ್ತು ಮಾಪಥೋನ್‍ನ ಭಾಗವಾಗಿ ಸಿದ್ಧಪಡಿಸಲಾದ ನಕ್ಷೆಯನ್ನು ಬಿಡುಗಡೆ ಮಾಡಲಿದ್ದಾರೆ.
ಕಾರ್ಯಕ್ರಮದಲ್ಲಿ ಸಂಸದ ಶಶಿ ತರೂರ್ ಮತ್ತು ಶಾಸಕ ಆಂಟೋನಿ ರಾಜು ಮುಖ್ಯ ಭಾಷಣ ಮಾಡಲಿದ್ದಾರೆ. ತಿರುವನಂತಪುರಂ ಕಾರ್ಪೋರೇಶನ್ ಮೇಯರ್ ಆರ್ಯ ರಾಜೇಂದ್ರನ್ ನವಕೇರಳಂ ಸುದ್ದಿಪತ್ರದ 50 ನೇ ಆವೃತ್ತಿಯನ್ನು ಬಿಡುಗಡೆ ಮಾಡಲಿದ್ದಾರೆ.
ಯೋಜನಾ ಅನುಷ್ಠಾನ ಮೌಲ್ಯಮಾಪನ ಮತ್ತು ಮೇಲ್ವಿಚಾರಣಾ ಇಲಾಖೆಯ ಕಾರ್ಯದರ್ಶಿ ಎಸ್. ಹರಿಕಿಶೋರ್, ಸ್ಥಳೀಯಾಡಳಿತ ಇಲಾಖೆಯ ವಿಶೇಷ ಕಾರ್ಯದರ್ಶಿ ಟಿ. ವಿ. ಅನುಪಮಾ, ಕೆ.ಎಸ್.ಡಬ್ಲ್ಯೂ.ಎಂ.ಪಿ. ಯೋಜನಾ ನಿರ್ದೇಶಕ ಡಾ. ದಿವ್ಯಾ ಎಸ್. ಅಯ್ಯರ್, ಸುಚಿತ್ವಂ ಮಿಷನ್‍ನ ಕಾರ್ಯನಿರ್ವಾಹಕ ನಿರ್ದೇಶಕ ಯು. ವಿ. ಜೋಸ್, ತಿರುವನಂತಪುರಂ ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಡ್ವ. ಡಿ. ಸುರೇಶ್ ಕುಮಾರ್, ಯೋಜನಾ ಮಂಡಳಿ ಸದಸ್ಯ ಡಾ. ಜಿಜು. ಪಿ. ಅಲೆಕ್ಸ್, ಕೇರಳ ಗ್ರಾಮ ಪಂಚಾಯತ್ ಸಂಘದ ಪ್ರಧಾನ ಕಾರ್ಯದರ್ಶಿ ಕೆ. ಸುರೇಶ್, ಬ್ಲಾಕ್ ಪಂಚಾಯತ್ ಅಸೋಸಿಯೇಶನ್ ಕೇರಳ ಪ್ರಧಾನ ಕಾರ್ಯದರ್ಶಿ ಎಂ. ಕೃಷ್ಣದಾಸ್, ಕೇರಳ ಬ್ಲಾಕ್ ಪಂಚಾಯತ್ ಅಸೋಸಿಯೇಶನ್ ಅಧ್ಯಕ್ಷ ಬಿ. ಪಿ. ಮುರಳಿ, ಎಂ.ಜಿ.ಎನ್.ಆರ್.ಇ.ಜಿ.ಎಸ್. ಮಿಷನ್ ನಿರ್ದೇಶಕ ರವಿರಾಜ್ ಆರ್, ಕ್ಲೀನ್ ಕೇರಳ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಜಿ. ಕೆ. ಸುರೇಶ್ ಕುಮಾರ್ ಮತ್ತಿತರರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ನವ ಕೇರಳ ಕ್ರಿಯಾ ಯೋಜನೆಯ ರಾಜ್ಯ ಸಂಯೋಜಕ ಡಾ. ಟಿ. ಎನ್. ಸೀಮಾ ಸ್ವಾಗತಿಸಲಿದ್ದು, ಯೋಜನಾ ಅನುμÁ್ಠನ, ಮೌಲ್ಯಮಾಪನ ಮತ್ತು ಮೇಲ್ವಿಚಾರಣಾ ಇಲಾಖೆಯ ಜಂಟಿ ನಿರ್ದೇಶಕ ರಜತ್ ಧನ್ಯವಾದ ಅರ್ಪಿಸಲಿದ್ದಾರೆ.
ಜನ ಪ್ರತಿನಿಧಿಗಳು, ಅಧಿಕಾರಿಗಳು, ಹರಿತ ಕೇರಳಂ ಮಿಷನ್‍ನ ಪ್ರತಿನಿಧಿಗಳು, ಕೇರಳದ ವಿವಿಧ ಸ್ಥಳೀಯ ಸ್ವ-ಆಡಳಿತ ಸಂಸ್ಥೆಗಳು ಮತ್ತು ಇತರ ಸಂಸ್ಥೆಗಳ ಪ್ರತಿನಿಧಿಗಳು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ.
2025 ರ ವಿಶ್ವ ಜಲ ದಿನದ ಥೀಮ್ 'ಹಿಮನದಿ ರಕ್ಷಣೆ'. ಈ ವಿಷಯವು ಹಸಿರು ಕೇರಳಂ ಮಿಷನ್‍ನಿಂದ ಸಂಯೋಜಿಸಲ್ಪಟ್ಟ ಪರಿಸರ ವಲಯದಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳ ನೇತೃತ್ವದಲ್ಲಿ ಕೇರಳದಲ್ಲಿ ನಡೆಯುತ್ತಿರುವ ಚಟುವಟಿಕೆಗಳಿಗೆ ನಿಕಟ ಸಂಬಂಧ ಹೊಂದಿದೆ.
ಆದ್ದರಿಂದ, ವಿಶ್ವ ಜಲ ದಿನದ ಜೊತೆಗೆ ಪರಿಸರ ಸಮ್ಮೇಳನವನ್ನು ಆಯೋಜಿಸಲಾಗುತ್ತಿದೆ. ಸಾರ್ವಜನಿಕ ಸಹಭಾಗಿತ್ವದೊಂದಿಗೆ ವಿವಿಧ ಚಟುವಟಿಕೆಗಳನ್ನು ಮುನ್ನಡೆಸಿದ ಸ್ಥಳೀಯ ಸ್ವ-ಆಡಳಿತ ಸಂಸ್ಥೆಗಳು, ವ್ಯಕ್ತಿಗಳು, ವಿವಿಧ ಸಂಸ್ಥೆಗಳು ಮತ್ತು ಸಂಸ್ಥೆಗಳ ಅನುಭವಗಳನ್ನು ಹಂಚಿಕೊಳ್ಳಲು, ತಜ್ಞರ ಅಭಿಪ್ರಾಯಗಳನ್ನು ಪಡೆಯಲು ಮತ್ತು ಗಮನಾರ್ಹ ಕೆಲಸ ಮಾಡಿದವರನ್ನು ಗೌರವಿಸಲು 'ಪರಿಸರ ಸಭೆ' ಒಂದು ವೇದಿಕೆಯಾಗಲಿದೆ ಎಂದು ಹಸಿರು ಕೇರಳಂ ಮಿಷನ್ ಉಪಾಧ್ಯಕ್ಷೆ ಡಾ. ಟಿ. ಎನ್. ಸೀಮಾ ಹೇಳಿರುವರು.