ಕೊಚ್ಚಿ: ಸಿಎಂಆರ್ಎಲ್-ಎಕ್ಸಲಾಜಿಕ್ ಭ್ರಷ್ಟಾಚಾರ ಪ್ರಕರಣದ ವಿಜಿಲೆನ್ಸ್ ತನಿಖೆಯನ್ನು ಹೈಕೋರ್ಟ್ ತಳ್ಳಿಹಾಕಿದೆ. ವಿಜಿಲೆನ್ಸ್ ತನಿಖೆ ಕೋರಿ ಶಾಸಕ ಮ್ಯಾಥ್ಯೂ ಕುಝಲ್ನಾಡನ್ ಮತ್ತು ಗಿರೀಶ್ ಬಾಬು ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಾಲಯ ತಿರಸ್ಕರಿಸಿತು.
ನ್ಯಾಯಮೂರ್ತಿ ಕೆ ಬಾಬು ಮನವಿ ತಳ್ಳಿ ಆದೇಶ ಹೊರಡಿಸಿದ್ದಾರೆ.
ಮುಖ್ಯಮಂತ್ರಿಯವರ ಪುತ್ರಿ ವೀಣಾ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಸಿಎಂಆರ್‍ಎಲ್ ವಿಷಯದ ಬಗ್ಗೆ ವಿಜಿಲೆನ್ಸ್ ತನಿಖೆ ನಡೆಸುವಂತೆ ಕೋರಿ ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಅರ್ಜಿಗಳು ರಾಜಕೀಯ ಪ್ರೇರಿತವಾಗಿವೆ ಎಂಬ ವಿಜಿಲೆನ್ಸ್ ನ್ಯಾಯಾಲಯದ ಹೇಳಿಕೆಗಳು ಅನಗತ್ಯ ಎಂದು ಹೈಕೋರ್ಟ್ ಗಮನಸೆಳೆದಿದೆ. ಸಿಎಂಆರ್ಎಲ್-ಎಕ್ಸಲಾಜಿಕ್ ಭ್ರಷ್ಟಾಚಾರ ಪ್ರಕರಣದ ಕುರಿತು ಎಸ್.ಎಫ್.ಐ.ಒ ಸೇರಿದಂತೆ ಕೇಂದ್ರ ಸಂಸ್ಥೆಗಳ ತನಿಖೆ ಮುಂದುವರೆದಿದೆ.