ಬದಿಯಡ್ಕ: ಮಧೂರು ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪಸೇವೆಯ ಸಂದರ್ಭವನ್ನು ಅವಿಸ್ಮರಣೀಯಗೊಳಿಸುವ ನಿಟ್ಟಿನಲ್ಲಿ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ವಿದ್ಯಾರ್ಥಿಗಳು ಬುಧವಾರ ಮಧ್ಯಾಹ್ನ ಶ್ರೀಕ್ಷೇತ್ರಕ್ಕೆ ಹಸಿರುವಾಣಿ ಕಾಣಿಕೆಯೊಂದಿಗೆ ಭೇಟಿಯಿತ್ತರು. ಶಾಲೆಯ ಐದು ವಾಹನಗಳಲ್ಲಾಗಿ ಎಲ್ಲಾ ಮಕ್ಕಳೂ ಶ್ರೀ ಮಹಾಗಣಪತಿಯ ದರ್ಶನವನ್ನು ಪಡೆದು ಶ್ರೀ ಮಹಾಗಣೇಶ ಪಂಚರತ್ನ ಸ್ತೋತ್ರವನ್ನು ಪಠಿಸಿದರು. ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ, ಅಧ್ಯಾಪಕ ವೃಂದದವರು ನೇತೃತ್ವವನ್ನು ವಹಿಸಿದ್ದರು.
ಅಭಿಮತ:
ಸಮಾಜದಲ್ಲಿ ಜರಗುವ ಸಾಂಸ್ಕøತಿಕ ಸಾಮಾಜಿಕ ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮನೋಧೈರ್ಯವನ್ನು ವಿದ್ಯಾಭ್ಯಾಸದ ಜೊತೆಯಲ್ಲೇ ವಿದ್ಯಾರ್ಥಿಗಳು ಪೋಣಿಸಿಗೊಳ್ಳಬೇಕು. ಈ ಐತಿಹಾಸಿಕ ಸಂದಭರ್Àದಲ್ಲಿ ಕುಂಬಳೆ ಸೀಮೆಯ ಪ್ರಸಿದ್ಧ ದೇವಸ್ಥಾನಕ್ಕೆ ಭೇಟಿ ನೀಡಿರುವುದು ವಿದ್ಯಾರ್ಥಿಗಳ ಬದುಕಿನ ನೆನಪಿನ ಪುಟದಲ್ಲಿ ಸದಾ ಹಸಿರಾಗಿರುತ್ತದೆ.
- ಜಯದೇವ ಖಂಡಿಗೆ, ಪ್ರಧಾನ ಕಾರ್ಯದರ್ಶಿ, ಬ್ರಹ್ಮಕಲಶೋತ್ಸವ ಸಮಿತಿ