ಬದಿಯಡ್ಕ: ಕಾರ್ಮಾರು ಶ್ರೀ ಮಹಾವಿಷ್ಣು ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ನಾಡಿನ ವಿವಿಧ ಧಾರ್ಮಿಕ ಕ್ಷೇತ್ರಗಳ ವತಿಯಿಂದ ಹಸಿರುವಾಣಿ ಸಮರ್ಪಣೆ ನಡೆಯಿತು. ಭಾನುವಾರ ಬೆಳಗ್ಗೆ ಅರ್ತಲ ಕೊಲ್ಲಂಗಾನ ಶ್ರೀ ರಕ್ತೇಶ್ವರಿ ನಾಗ ಗುಳಿಗ ಕ್ಷೇತ್ರ, ಶ್ರೀ ಚಾಮುಂಡೇಶ್ವರೀ ಕಲ್ಲುರ್ಟಿ ಕ್ಷೇತ್ರ ಕಜಳ, ಕೊಲ್ಲಂಗಾನ ಶ್ರೀ ಶಾರದಾ ಭಜನಾಮಂದಿರ, ಪಜ್ಜ ಶ್ರೀ ಅಯ್ಯಪ್ಪ ಭಜನಾ ಮಂದಿರದ ವತಿಯಿಂದ ಹಸಿರುವಾಣಿ ಸಮರ್ಪಣೆ ನಡೆಯಿತು.
ಕಾರ್ಮಾರು ಕ್ಷೇತ್ರದ ಪದಾಧಿಕಾರಿಗಳು ವಾದ್ಯ ಘೋಷಗಳೊಂದಿಗೆ ಸ್ವಾಗತಿಸಿ ಶ್ರೀದೇವರಲ್ಲಿ ಪ್ರಾರ್ಥನೆಯನ್ನು ಸಲ್ಲಿಸಿದರು. ಕೊಲ್ಲಂಗಾನ ಪರಿಸರದ ಸುಮಾರು 150 ಮಂದಿ ಸ್ವಯಂಸೇವಕರು ಭಾನುವಾರ ಸೇವೆಯಲ್ಲಿ ತೊಡಗಿಸಿಕೊಂಡರು.