ಪ್ಲೋರಿಡಾ: ಭಾರತ ಮೂಲದ ನಾಸಾ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಶೀಘ್ರದಲ್ಲೇ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ಸುನಿತಾ ಅವರ ಸಂಬಂಧಿ ಪಲ್ಗುಣಿ ಪಾಂಡ್ಯ ತಿಳಿಸಿದ್ದಾರೆ.
ಈ ಬಗ್ಗೆ ಸುದ್ದಿವಾಹಿನಿ ಎನ್‌ಡಿಟಿವಿ ಜೊತೆ ಅವರು ಮಾತನಾಡಿದ್ದಾರೆ.
ಸುನಿತಾ ವಿಲಿಯಮ್ಸ್, ಬುಚ್ ಹೊಸ ದಾಖಲೆ; ಬಾಹ್ಯಾಕಾಶದಲ್ಲಿ 5.5 ಗಂಟೆ ನಡಿಗೆಶ್ವೇತಭವನದಲ್ಲಿ ದೀಪಾವಳಿ: ಬೈಡನ್‌ಗೆ ಸುನಿತಾ ವಿಲಿಯಮ್ಸ್ ಧನ್ಯವಾದ
9 ತಿಂಗಳಿಗೂ ಹೆಚ್ಚು ಕಾಲ ಬಾಹ್ಯಾಕಾಶ ನಿಲ್ದಾಣದಲ್ಲಿಯೇ ಉಳಿದುಕೊಂಡಿದ್ದ ಸುನಿತಾ ಸುನಿತಾ ಭೂಮಿಗೆ ಮರಳಿರುವುದು ನಮಗೆ ಬಹಳ ಸಂತೋಷವಾಗಿದೆ.
ಇದೇ ವರ್ಷದಲ್ಲಿ ಅವರು ಭಾರತಕ್ಕೆ ಬರಲಿದ್ದಾರೆ ಎಂದು ಹೇಳಿದ್ದಾರೆ.
ಈ ಸಲ ಭಾರತಕ್ಕೆ ಬಂದಾಗ ಸುನಿತಾ ಕುಟುಂಬದ ಜೊತೆ ಹೆಚ್ಚು ಸಮಯ ಕಳೆಯಲಿದ್ದಾರೆ. ನಾವು ಕೆಲವು ಪುಣ್ಯ ಕ್ಷೇತ್ರಗಳಿಗೂ ಭೇಟಿ ನೀಡಲಿದ್ದೇವೆ. ಈ ಬಗ್ಗೆ ನಾನು, ಸುನಿತಾ ಪ್ಲಾನ್ ಮಾಡಿಕೊಂಡಿದ್ದೇವೆ ಎಂದು ಅವರು ಹೇಳಿದರು.
ಸುನಿತಾ ಮತ್ತೆ ಬಾಹ್ಯಾಕಾಶಕ್ಕೆ ಹೋಗುತ್ತಾರೆಯೇ ಅಥವಾ ಮಂಗಳ ಗ್ರಹದ ಮೇಲೆ ಕಾಲಿಡುವ ಮೊದಲ ವ್ಯಕ್ತಿಯಾಗುತ್ತಾರೆಯೇ ಎಂದು ಕೇಳಿದಾಗ, ಇದು ಅವರ ಆಯ್ಕೆ ಎಂದು ಪಲ್ಗುಣಿ ಪಾಂಡ್ಯ ಹೇಳಿದರು.