ಬದಿಯಡ್ಕ: 144 ವರ್ಷಗಳಿಗೊಮ್ಮೆ ನಡೆಯುವ ಮಹಾಕುಂಭ ಮೇಳಕ್ಕೆ ಕೇರಳದಿಂದ ಆಗಮಿಸಿದ ತಂಡವನ್ನು ಪ್ರಯಾಗ್‍ರಾಜ್‍ನಲ್ಲಿ ಸ್ವಾಮಿ ಚಿದಾನಂದ ಸರಸ್ವತೀ ಶ್ರೀಗಳು ಆತ್ಮೀಯವಾಗಿ ಬರಮಾಡಿಕೊಂಡು ಭೋಜನದ ವ್ಯವಸ್ಥೆ, ಮಹಿಳೆಯರಿಗೆ ಸೀರೆಯನ್ನು ನೀಡಿ ಹರಸಿದರು.
ಕೇರಳದ ಭಕ್ತರನ್ನು ಕಂಡಾಗ ಶ್ರೀಗಳು ಸಂತೋಷದಿಂದ ಎದುರುಗೊಂಡಿದ್ದರು. 125 ಜನರ ತಂಡವು ಫೆ.18ರಂದು ಕುಂಭಮೇಳಕ್ಕೆ ತೃಶ್ಶೂರಿನಿಂದ ಹೊರಟಿತ್ತು. ಈ ತಂಡದಲ್ಲಿ ಕಾಸರಗೋಡಿನ 4 ಮಂದಿಯೂ ಪ್ರಯಾಣಿಸಿ, ಶುಕ್ರವಾರ ಊರಿಗೆ ಮರಳಿರುವರು.