ಮಧೂರು: ಮಧೂರು ಕ್ಷೇತ್ರ ಬ್ರಹ್ಮಕಲಶೋತ್ಸವ ಹಿನ್ನೆಲೆಯಲ್ಲಿ ಶ್ರಮದಾನದ ಮೂಲಕ ಕೆಲಸ ನಿರ್ವಹಿಸಲು ದಿನ ಕಳೆದಂತೆ ಕಾರ್ಯಕರ್ತರ ಸಂಖ್ಯೆ ಹಚ್ಚಾಗತೊಡಗಿದೆ. ಸೋಮವಾರ ತಲಪ್ಪಾಡಿಯ ಶ್ರೀ ಶಾರದಾ ವಿದ್ಯಾಲಯದ 60ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳು ಕರಸೇವೆಯಲ್ಲಿ ಪಾಲ್ಗೊಂಡಿದ್ದರು. ನಿರ್ಮಾಣಹಂತದಲ್ಲಿರುವ ಕಟ್ಟಗಳ ಅಂತಿಮ ಹಂತದ ಕೆಲಸ, ಶುಚೀಕರಣ, ಪೇಂಟಿಂಗ್, ಸಾರಣೆ, ಸಾಮಗ್ರಿಗಳ ಜೋಡಣೆ ಸೇರಿದಂತೆ ವಿವಿಧ
ಬ್ರಹ್ಮಕಲಶೋತ್ಸವ ಅಂಗವಾಗಿ ನಿರ್ಮಿಸಲಾದ ಉಗ್ರಾಣದಲ್ಲಿ ಸೋಮವಾರ ಉಗ್ರಾಣ ಪೂಜೆ, ಹೋಮ ನಡೆಯಿತು. ತಂತ್ರಿವರ್ಯ ದೇರೆಬೈಲು ಬ್ರಹ್ಮಶ್ರೀ ಡಾ. ಶಿವಪ್ರಸಾದ ತಂತ್ರಿ ಪೂಜೆ ನೆರವೇರಿಸಿದರು. ಮಾಣಿಲಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿ, ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿಗಳು, ಭಕ್ತಾದಿಗಳು ಉಪಸ್ಥಿತರಿದ್ದರು. ಈಗಾಗಲೇ ಉಗ್ರಾಣಕ್ಕೆ ಸುವಸ್ತುಗಳು ಹರಿದುಬರಲಾರಂಭಿಸಿದ್ದು, ಮಾಣಿಲಶ್ರೀಗಳು ಸ್ವತ: ಅಕ್ಕಿ ಚೀಲವನ್ನು ತಲೆಮೇಲೆ ಹೊತ್ತುಕೊಂಡು ಭಕ್ತಾದಿಗಳ ಜತೆಗೆ ಉಗ್ರಾಣದ ಕಡೆ ಹೆಜ್ಜೆಹಾಕಿದರು. ದೇವಸ್ಥಾನದಲ್ಲಿ ನಡೆಯುತ್ತಿರುವ ಕೆಲಸಕಾರ್ಯಗಳ ಬಗ್ಗೆ ಮಾರ್ಗದರ್ಶನ ನೀಡುವುದರ ಜತೆಗೆ ಸ್ವತ: ಕೆಲಸ ನಿರ್ವಹಿಸುವ ಮೂಲಕ ಮಾಣಿಲಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿ ಕಾರ್ಯಕರ್ತರಿಗೆ ಪ್ರೇರಣೆ ನೀಡುತ್ತಿದ್ದಾರೆ.