ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತಿ ಸಾಂತ್ವನಂ ಬಡ್ಸ್ ಶಾಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಕಾಸರಗೋಡು ಲೀಡ್ ಬ್ಯಾಂಕ್ ನೇತೃತ್ವದಲ್ಲಿ ಕ್ಷೇತ್ರ ಮಟ್ಟದ ಆರ್ಥಿಕ ಸಾಕ್ಷರತಾ ಜಾಗೃತಿ ಕಾರ್ಯಕ್ರಮವನ್ನು ನಡೆಸಲಾಯಿತು.
ಎಣ್ಮಕಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಜೆ.ಎಸ್.ಸೋಮಶೇಖರ ಅಧ್ಯಕ್ಷತೆ ವಹಿಸಿದ್ದರು. ರಿಸರ್ವ್ ಬ್ಯಾಂಕ್ ಡಿಜಿಎಂ ಕೆ.ಬಿ. ಶ್ರೀಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜಿಲ್ಲಾ ಸಾಮಾಜಿಕ ನ್ಯಾಯ ಅಧಿಕಾರಿ ಆರ್ಯ ಪಿ ರಾಜ್, ನಂಬಾರ್ಡ್ ಡಿಡಿಎಂ ಶರೋನ್‍ವಾಸ್, ಆರ್‍ಬಿಐ ಎಲ್‍ಡಿಒ ಶ್ಯಾಮ್ ಸುಂದರ್ ಮತ್ತು ಲೀಡ್ ಜಿಲ್ಲಾ ವ್ಯವಸ್ಥಾಪಕ ಎಸ್. ತಿಪ್ಪೇಶ್ ಭಾಗವಹಿಸಿದ್ದರು. ಎಸ್‍ಬಿಐ ಪ್ರಾದೇಶಿಕ ವ್ಯವಸ್ಥಾಪಕ ಬಿಜೇಶ್, ಕೆನರಾ ಬ್ಯಾಂಕ್ ಡಿಎಂ ಎಲ್. ಸೋಮಶೇಖರನ್ ನಾಯಕ್, ಗ್ರಾ.ಪಂ.ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಶ್ರೀ ಕುಲಾಲ್, ಗ್ರಾಮ ಪಂಚಾಯತಿ ಸದಸ್ಯ ನರಸಿಂಹ ಪೂಜಾರಿ, ಸಿಡಿಎಸ್ ಅಧ್ಯಕ್ಷೆ ಜಲಜಾಕ್ಷಿ, ಮತ್ತು ಬಡ್ಸ್ ಶಾಲಾ ನಿರ್ವಹಣಾ ಕಾರ್ಯನಿರ್ವಾಹಕ ಸದಸ್ಯ ರಾಜಾ ರಾಮ್ ಶುಭ ಹಾರೈಸಿದರು. ಸಿಎಫ್‍ಎಲ್ ಸಂಯೋಜಕ ಕೆ.ಪಿ. ಲಿನ್ಸೆ ಮತ್ತು ಎಫ್‍ಎಲ್‍ಸಿ ಕೌನ್ಸಿಲರ್ ಸುಬ್ರಹ್ಮಣ್ಯ ಶೆಣೈ ತರಗತಿ ನಡೆಸಿದರು. ಸಮಾರಂಭದಲ್ಲಿ ಶಾಲಾ ಮಕ್ಕಳಿಗಾಗಿ ಸ್ಮಾರ್ಟ್ ಟಿವಿಗಳನ್ನು ಶಾಲೆಗೆ ಹಸ್ತಾಂತರಿಸಲಾಯಿತು. ಕಾರ್ಯಕ್ರಮದಲ್ಲಿ ಸಾಂತ್ವನಂ ಬಡ್ಸ್ ವಿಶೇಷ ಶಾಲೆಯ ಪ್ರಾಂಶುಪಾಲೆ ಕೆ. ಮರಿಯಂಬಿ ವಂದಿಸಿದರು.
ಈ ಸಂದರ್ಭ ನಾಣ್ಯ ಮೇಳವನ್ನೂ ಆಯೋಜಿಸಲಾಗಿತ್ತು. ಜಿಲ್ಲೆಯ ಎಫ್.ಎಲ್.ಸಿ.ಸಿ.ಎಫ್.ಎಲ್ ನ ಪ್ರತಿನಿಧಿಗಳು ಕಾರ್ಯಕ್ರಮದ ಭಾಗವಾಗಿದ್ದರು.