ಮುಳ್ಳೇರಿಯ: ಕೆಎಸ್ ಟಿ ಎ ಕುಂಬಳೆ ಉಪಜಿಲ್ಲಾ ಸಮಿತಿಯ ಆಶ್ರಯದಲ್ಲಿ ನಿವೃತ್ತಿ ಹೊಂದುತ್ತಿರುವ ಶಿಕ್ಷಕರಿಗೆ ಬೀಳ್ಕೊಡುಗೆ ಕೂಟವನ್ನು ಏರ್ಪಡಿಸಲಾಯಿತು. ಜೊತೆಗೆ ಸಂಸ್ಥೆಯು ಆಯೋಜಿಸಿದ್ದ ಕಲೆ ಮತ್ತು ಕ್ರೀಡಾ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದಲ್ಲಿ ಬಹುಮಾನಿತರಾದವರಿಗೆ ಮತ್ತು ರಾಜ್ಯ ವನಮಿತ್ರ ಪ್ರಶಸ್ತಿ ವಿಜೇತ ಶಿಕ್ಷಕಿ ಎಂ.ಸಾವಿತ್ರಿ ಅವರನ್ನು ಸನ್ಮಾನಿಸಲಾಯಿತು.
ದೇಲಂಪಾಡಿ ಪಂಚಾಯತಿ ಅಧ್ಯಕ್ಷೆ ಎ.ಪಿ. ಉಷಾ ಉದ್ಘಾಟಿಸಿದರು. ಕೆ.ಕೆ. ಮೋಹನನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಎನ್. ಕೆ. ಲಸಿತಾ ಸನ್ಮಾನಿಸಿದರು.
0ಪ್ರತೀಶ್.ಕೆ.ಜಿ. ವಿಷ್ಣುಪಾಲ್ ಬಿ, ಸದಾನಂದನ್ ಎ.ಕೆ.,ರಾಜೇಶ್.ಎಂ., ಅನೀಶ್ ರಾಜ್ ಪಾಯಂ. ಪ್ರಕಾಶ್ ಬಿ.ಎಂ., ಕುಂಞÂ್ಞ ಕೃಷ್ಣನ್, ಎನ್.ವಿ. ದೀಪರಾಜಗೋಪಾಲ್, ಮತ್ತು ಬಿನ್ನಿ ಐರಟ್ಟಿಲ್ ಮಾತನಾಡಿದರು. ಪಿ. ಕುಂಞಂಬು ಸ್ವಾಗತಿಸಿ, ಶಶಿಧರನ್ ಪಿ.ಕೆ.ವಂದಿಸಿದರು.