ಮುಳ್ಳೇರಿಯ : ಇಲ್ಲಿನ ಕಯ್ಯಾರ ಕಿಂಞಣ್ಣ ರೈ ಗ್ರಂಥಾಲಯದಲ್ಲಿ ಕಯ್ಯಾರರ ಸಾಹಿತ್ಯ ಪ್ರವೇಶ ಎಂಬ ವಿನೂತನ ಕಾರ್ಯಕ್ರಮ ಶುಕ್ರವಾರ ಜರಗಿತು. ಕವಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಉದ್ಘಾಟಿಸಿದರು. ರಾಘವನ್ ಬೆಳ್ಳಿಪ್ಪಾಡಿ ಅಧ್ಯಕ್ಷತೆ ವಹಿಸಿದ್ದರು. ಸುಭಾಶ್ ಪಟ್ಟಾಜೆ , ರವೀಂದ್ರನ್ ಪಾಡಿ, ಸುಂದರ ಬಾರಡ್ಕ, ಪಿ. ಕುಂಇಂಬು ಮಾಸ್ತರ್ ,ಚಂದ್ರನ್ ಮೊಟ್ಟಾಮಲ್ ಕಯ್ಯಾರರ ಸಾಹಿತ್ಯ ಕೃತಿಗಳ ಬಗ್ಗೆ ಮಾತನಾಡಿದರು. ಕಯ್ಯಾರರ ಕವಿತೆಗಳ ಗಾಯನವೂ ಈ ಸಂದರ್ಭ ಜರಗಿತು.
ಗ್ರಂಥಾಲಯ ಕಾರ್ಯದರ್ಶಿ ಕೆ ಕೆ ಮೋಹನನ್ ಸ್ವಾಗತಿಸಿ ಕೆ.ಗೋವಿಂದನ್ ವಂದಿಸಿದರು.