ನವದೆಹಲಿ: ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು ಬದಲಾವಣೆ ಮಾಡುವ ಕುರಿತು ಸರ್ಕಾರದ ಮುಂದೆ ಯಾವುದೇ ಪ್ರಸ್ತಾವ ಇಲ್ಲ ಎಂದು ಕೇಂದ್ರ ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಬುಧವಾರ ತಿಳಿಸಿದರು.
ಲೋಕಸಭೆಯಲ್ಲಿ ಲಿಖಿತ ಉತ್ತರ ನೀಡಿದ ಅವರು 'ಸಿಬ್ಬಂದಿಯ ನಿವೃತ್ತಿ ಬಳಿಕ ಖಾಲಿ ಉಳಿಯುವ ಹುದ್ದೆಗಳನ್ನು ರದ್ದುಪಡಿಸುವಂತಹ ಯಾವುದೇ ನೀತಿ ಇಲ್ಲ.
ನಿವೃತ್ತಿ ವಯಸ್ಸನ್ನು ಬದಲಾವಣೆ ಮಾಡುವಂತೆ ಯಾವುದೇ ಸಿಬ್ಬಂದಿಯಿಂದಲೂ ಪ್ರಸ್ತಾಪ ಬಂದಿಲ್ಲ' ಎಂದು ಸ್ಪಷ್ಟಪಡಿಸಿದರು.
ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯಸ್ಸು ಈಗ 60 ವರ್ಷ ಇದೆ.