ಕಾಸರಗೋಡು: ಜಿಲ್ಲಾ ಎಂಪ್ಲೋಯ್ ಮೆಂಟ್ ಎಕ್ಸ್‍ಚೇಂಜ್ ನಲ್ಲಿ ಕಾರ್ಯಾಚರಿಸುವ ಎಂಪ್ಲೋಯಬಿಲಿಟಿ ಸೆಂಟರ್‍ನ ನೇತೃತ್ವದಲ್ಲಿ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಗಿಟ್ಟಿಸಲು ಅವಕಾಶ ಕಲ್ಪಿಸಲಾಗಿದೆ. ಮಾ. 27ರಂದು ಬೆಳಗ್ಗೆ 10ಕ್ಕೆ ಕಾಞಂಗಾಡು ಮಿನಿ ಸಿವಿಲ್ ಸ್ಟೇಷನ್ ನಲ್ಲಿ ಕಾರ್ಯಾಚರಿಸುತ್ತಿರುವ ಹೊಸದುರ್ಗ ಪಟ್ಟಣದ ಎಂಪೆÇ್ಲೀಯ್ ಮೆಂಟ್ ಎಕ್ಸ್‍ಚೇಂಜ್ ನಲ್ಲಿ ನೋಂದಣಿ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಉದ್ಯೋಗ ಪಡೆಯಲು ಅಗತ್ಯವಾದ ಉದ್ಯೋಗ ಸಂದರ್ಶನ ತರಬೇತಿ, ಇಂಗ್ಲಿಷ್ ತರಗತಿಗಳು, ಸಾಫ್ಟ್ ಸ್ಕಿಲ್ ತರಬೇತಿ ಇತ್ಯಾದಿಗಳು ಒಂದು ಬಾರಿ ನೋಂದಣಿಯೊಂದಿಗೆ ಜೀವಮಾನದವರೆಗೆ ಉಚಿತವಾಗಿ ಎಂಪೆÇ್ಲೀಯಬಿಲಿಟಿ ಸೆಂಟರ್‍ನ ಮೂಲಕ ಲಭ್ಯವಾಗುವುದು. ಉದ್ಯೋಗ ಪಡೆಯಲು ಪ್ರತಿವಾರ ಖಾಸಗಿ ಕಂಪನಿಗಳಿಗೆ ಸಂದರ್ಶನವನ್ನೂ ನಡೆಸಲಾಗುವುದು. ಆಸಕ್ತ ಉದ್ಯೋಗಾರ್ಥಿಗಳು ಪ್ರಮಾಣಪತ್ರಗಳ ಪ್ರತಿಗಳು ಮತ್ತು ಆಧಾರ್ ಕಾರ್ಡ್ ಪ್ರತಿಗಳೊಂದಿಗೆ 250 ರೂಪಾಯಿ ಶುಲ್ಕವನ್ನು ಪಾವತಿಸಿ ನೋಂದಾವಣೆ ಮಾಡಬಹುದಾಗಿದೆ. ಎಸ್ಸೆಸೆಲ್ಸಿಯಿಂದ ಮೇಲ್ಪಟ್ಟ ಅರ್ಹತೆಯಿರುವ 18ರಿಂದ 35 ವಯೋಮಿತಿಯ ಉದ್ಯೋಗಾರ್ಥಿಗಳಿಗೆ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ(9207155700)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.