ನವದೆಹಲಿ: ಗುಜರಾತಿನ ಖಾಡ್ವಾ ಬಳಿ, ಪಾಕಿಸ್ತಾನಕ್ಕೆ ಹೊಂದಿಕೊಂಡಿರುವ ಗಡಿ ಸಮೀಪ ನವೀಕರಿಸಬಹುದಾದ ಇಂಧನ ಪಾರ್ಕ್ ನಿರ್ಮಾಣಕ್ಕೆ ಅದಾನಿ ಸಮೂಹಕ್ಕೆ ಅನುಮತಿ ನೀಡಿರುವ ವಿಚಾರ ಲೋಕಸಭೆಯಲ್ಲಿ ಬುಧವಾರ ಪ್ರತಿಧ್ವನಿಸಿತು.
ಈ ವಿಚಾರವಾಗಿ ಕೇಂದ್ರ ಸರ್ಕಾರ 'ತೃಪ್ತಿಕರ ಉತ್ತರ' ನೀಡುತ್ತಿಲ್ಲ ಹಾಗೂ ರಾಷ್ಟ್ರೀಯ ಭದ್ರತೆಯೊಂದಿಗೆ ರಾಜಿ ಮಾಡಿಕೊಂಡಿದೆ ಎಂದು ದೂರಿ ಕಾಂಗ್ರೆಸ್, ಡಿಎಂಕೆ ಸೇರಿದಂತೆ ವಿಪಕ್ಷಗಳ ಸಂಸದರು ಸಭಾತ್ಯಾಗ ಮಾಡಿದ್ದಕ್ಕೂ ಕಲಾಪವು ಸಾಕ್ಷಿಯಾಯಿತು.