ತಿರುವನಂತಪುರಂ: ಕೇರಳದಾದ್ಯಂತ ಹೆಚ್ಚಿನ ಶಾಲೆಗಳಿಗೆ ಈಜು ತರಬೇತಿಯನ್ನು ವಿಸ್ತರಿಸಲಾಗುವುದು ಎಂದು ಸಾಮಾನ್ಯ ಶಿಕ್ಷಣ ಮತ್ತು ಉದ್ಯೋಗ ಸಚಿವ ವಿ. ಶಿವನ್‍ಕುಟ್ಟಿ ತಿಳಿಸಿದ್ದಾರೆ.
ಈಜು ತರಬೇತಿಯ ಮೂಲಕ ನಾವು ಜೀವನ ಕೌಶಲ್ಯವನ್ನು ಕಲಿಸುವುದಲ್ಲದೆ, ನಮ್ಮ ಭವಿಷ್ಯವನ್ನು ರಕ್ಷಿಸುವ ಅರಿವು ಲಭಿಸಲಿದೆ ಎಂದು ಸಚಿವರು ಹೇಳಿರುವರು.
ಈಜುವುದನ್ನು ಕಲಿಯುವುದರಿಂದ ನಮಗೆ ಆತ್ಮವಿಶ್ವಾಸ ಮತ್ತು ಅಗತ್ಯ ಸಮಯದಲ್ಲಿ ರಕ್ಷಿಸಿಕೊಳ್ಳಲು ಮತ್ತು ಇತರರನ್ನು ಅಪಾಯದಿಂದ ರಕ್ಷಿಸಲು ಸಾಮಥ್ರ್ಯ ಲಭಿಸುತ್ತದೆ. ಈಜು ಮತ್ತು ನೀರಿನ ಸುರಕ್ಷತೆಯನ್ನು ಪಠ್ಯಕ್ರಮದಲ್ಲಿ ಸೇರಿಸಲಾಗಿದೆ.
ಪಠ್ಯಕ್ರಮವನ್ನು ವಿಶಾಲ ಮತ್ತು ಪ್ರಾಯೋಗಿಕ ದೃಷ್ಟಿಕೋನದಿಂದ ವಿನ್ಯಾಸಗೊಳಿಸಲಾಗಿದ್ದು, ಇದು ವಿದ್ಯಾರ್ಥಿಗಳು ಆರೋಗ್ಯ, ದೈಹಿಕ ಸದೃಢತೆ ಮತ್ತು ದೈಹಿಕ ಚಟುವಟಿಕೆಯ ಬಗ್ಗೆ ಆಳವಾದ ತಿಳುವಳಿಕೆಯನ್ನು ಬೆಳೆಸಿಕೊಳ್ಳಲು ಸಹಾಯ ಮಾಡುತ್ತದೆ.
ನೇಮಮ್ ಕ್ಷೇತ್ರದ ನೆಡುಮ್ಕಾಡ್ ಸರ್ಕಾರಿ ಶಾಲೆಯಲ್ಲಿ ನಿರ್ಮಾಣ ಹಂತದಲ್ಲಿರುವ ಈಜುಕೊಳವು ಮಕ್ಕಳಿಗೆ ಮಾತ್ರವಲ್ಲದೆ ತಾಯಂದಿರಿಗೂ ಈಜು ತರಬೇತಿಗೆ ಸೌಲಭ್ಯಗಳನ್ನು ಒದಗಿಸುತ್ತದೆ ಎಂದು ಸಚಿವರು ತಿಳಿಸಿದರು.