ಉಪ್ಪಳ: ಮಂಜೇಶ್ವರ ತಾಲೂಕು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿ ಎಂ.ಗಂಗಾಧರನ್ ಅವರು 29 ವರ್ಷಗಳ ಸೇವೆಯ ನಂತರ ನಿವೃತ್ತರಾಗಿದ್ದು, ಕಚೇರಿಯಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಯಿತು. ಮಂಜೇಶ್ವರ ತಾಲೂಕು ನಾಗರಿಕ ಪೂರೈಕೆ ಕಛೇರಿಯಲ್ಲಿ ಸಿಬ್ಬಂದಿ ವರ್ಗದವರ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬದಿಯಡ್ಕ ಸನಿಹದ ನೆಕ್ರಾಜೆ ನಿವಾಸಿಯಾಗಿರುವ ಗಂಗಾಧರ 1996ರಲ್ಲಿ ಸ್ಟೇಷನರಿ ಇಲಾಖೆಯಲ್ಲಿ ಸೇವೆ ಆರಂಭಿಸಿದ್ದು, 1997ರಲ್ಲಿ ನಾಗರಿಕ ಸರಬರಾಜು ಇಲಾಖೆಗೆ ಸೇರ್ಪಡೆಗೊಂಡು ಮಂಜೇಶ್ವರಂ, ಕಾಸರಗೋಡು ಸಹಾಯಕ ತಾಲೂಕು ಪೂರೈಕೆ ಅಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದರು. ಸಪ್ಲೈಕೋ ಡಿಪೆÇೀ ಮ್ಯಾನೇಜರ್ ಆಗಿ ನಡೆಸಿದ ಉತ್ತಮ ಸೇವೆಗಾಗಿ 2021ರಲ್ಲಿ ಸರ್ಕಾರದ ಉತ್ತಮ ಸೇವಾ ಪ್ರಶಸ್ತಿ ಪಡೆದುಕೊಂಡಿದ್ದರು. ಸಮಾರಂಭದಲ್ಲಿ ಜಿಲ್ಲಾ ನಾಗರಿಕ ಸರಬರಾಜು ಅಧಿಕಾರಿ ಕೆ.ಎನ್.ಬಿಂದು ಸಮಾರಂಭ ಉದ್ಘಾಟಿಸಿ, ಗಂಗಾಧರ್ ಅವರನ್ನು ಗೌರವಿಸಿದರು. ಸಹಾಯಕ ತಾಲೂಕು ಸರಬರಾಜು ಅಧಿಕಾರಿ ಕೆ.ರಾಜೀವನ್ ಅಧ್ಯಕ್ಷತೆ ವಹಿಸಿದ್ದರು. ಮಂಜೇಶ್ವರ ರೇಶನಿಂಗ್ ಇನ್ಸ್‍ಪೆಕ್ಟರ್(ಆರ್‍ಐ) ಇ.ಪ್ರದೀಪ್ ಕುಮಾರ್ ಸ್ವಾಗತಿಸಿದರು. ಕುಂಬಳೆ ಆರ್.ಐ. ಸುರೇಶ್ ನಾಯ್ಕ್ ವಂದಿಸಿದರು.