ಕುಂಬಳೆ: ಉಳುವಾರು ಶಂಸುಲ್ ಉಲಾಮ ಇಸ್ಲಾಮಿಕ್ ಸೆಂಟರ್ ಹಾಗೂ ಎಸ್‍ವೈಎಸ್, ಎಸ್‍ಎಸ್ ಎಸ್‍ಎಫ್ ಶಾಖೆಗಳ ಜಂಟಿ ಆಶ್ರಯದಲ್ಲಿ ಭಾನುವಾರದಿಂದ ಮಂಗಳವಾರದವರೆಗೆ ಬಾಯಿಕಟ್ಟೆ ಶಂಸುಲ್ ಉಲಾಮಾ ನಗರದಲ್ಲಿ ರಂಜಾನ್ ಪ್ರವಚನ ಆಯೋಜಿಸಲಾಗುವುದು.
ಮಾ.23ರಂದು ಬೆಳಿಗ್ಗೆ 8.30ಕ್ಕೆ ಮಖಾಂಎಸಿಯಾರತ್ ಬಳಿಕ 9 ಕ್ಕೆ ಎಸ್‍ವೈಎಸ್ ಶಾಖಾ ಅಧ್ಯಕ್ಷ ಕೆ.ಎಂ. ಮೊಹಮ್ಮದ್ ಧ್ವಜಾರೋಹಣಗೈಯ್ಯುವರು. ಬಳಿಕ ಮಜ್ಲಿಸುನ್ನೂರ್‍ಗೆ ಹಾದಿ ತಂಙಳ್ ಮೊಗ್ರಾಲ್ ನೇತೃತ್ವ ನೀಡುವರು. 10 ಕ್ಕೆ ಧಾರ್ಮಿಕ ಪ್ರವಚನ ಆರಂಭಗೊಳ್ಳಲಿದ್ದು, ಕೆ.ಬಿ. ಅಬೂಬಕ್ಕರ್ ಅಧ್ಯಕ್ಷತೆ ವಹಿಸುವರು. ಎನ್.ಪಿ.ಎಂ. ಶರಪುದ್ದೀನ್ ತಂಙಳ್, ಅಬ್ದುಲ್ ರಝಾಕ್ ಅಬ್ರಾರಿ ಪ್ರವಚನ ನೀಡುವರು. ಮುಂದಿನ ದಿನಗಳಲ್ಲಿ ಹಲವು ಗಣ್ಯರು ಭಾಗವಹಿಸುವರು. ಸಮಾರೋಪ ಸಮಾರಂಭ ಕಬೀರ್ ಫೈಸಿಯವರ ಅಧ್ಯಕ್ಷತೆಯಲ್ಲಿ ಕೆ.ಎಸ್. ಶಮೀಮ್ ತಂಙಳ್ ಕುಂಬೋಳ್ ಉದ್ಘಾಟಿಸುವರು. ಸಿರಾಜುದ್ದೀನ್ ಖಾಸಿಮಿ ಪತ್ತ£, ಹಸೈನಾರ್, ಮಹಮ್ಮದ್ ಉಳುವಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಹಲವಾರು ಗಣ್ಯರು ಉಪಸ್ಥಿತರಿರುವರು ಎಂದು ಪದಾಧಿಕಾರಿಗಳಾದ ಕೆ.ಬಿ. ಅಬೂಬಕ್ಕರ್, ಅಬ್ದುಲ್ ಮೀರಾನ್ ಕುಂಞ ಹಾಜಿ, ಯು.ಕೆ. ಖಾದರ್ ಕುಂಬಳೆಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.