ಗಗನಯಾನಿಗಳು ಇದ್ದ ಸ್ಪೇಸ್ ಎಕ್ಸ್ ಕಂಪನಿಯ ಡ್ರ್ಯಾಗನ್ ಕ್ಯಾಪ್ಸೊಲ್ ಅಮೆರಿಕದ ಪ್ಲೋರಿಡಾ ಕರಾವಳಿಯಲ್ಲಿ ಸುರಕ್ಷಿತವಾಗಿ ಬಂದಿಳಿಯಿತು.
ಮುಂಜಾನೆ ಸಮುದ್ರದ ಮೇಲೆ ಸೂರ್ಯನ ಕಿರಣಗಳು ಸ್ಪರ್ಶಿಸುತ್ತಿದ್ದಂತೆಯೇ ಡ್ರ್ಯಾಗನ್ ಕ್ಯಾಪ್ಸೊಲ್ ಸುತ್ತಲೂ ಡಾಲ್ಫಿನ್‌ಗಳು ನೆರದಿದ್ದು ಬೆರಗು ಮೂಡಿಸಿತು.
ನಾಸಾ ಸಂಸ್ಥೆ ಒಟ್ಟಾರೆ ಈ ಪ್ರಕ್ರಿಯೆಯನ್ನು ಯೂಟ್ಯೂಬ್‌ನಲ್ಲಿ ನೇರಪ್ರಸಾರ ಮಾಡಿದೆ.
ಕ್ಯಾಪ್ಸೊಲ್ ಹಿಂದೆ-ಮುಂದೆ, ಆಚೆ-ಈಚೆ ಹತ್ತಾರು ಡಾಲ್ಫಿನ್‌ಗಳು ಕುಣಿದಾಡುತ್ತಿವೆಯೋ ಎಂಬಂತೆ ಕಂಡು ಬಂತು. ಮಾನವನ ಸಾಧನೆಗೆ ನಿಸರ್ಗವೂ ಸಂತಸ ವ್ಯಕ್ತಪಡಿಸಿತು ಎಂಬಂತೆ ಇದು ತೋರಿತು ಎಂದು ಹಲವು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷ ಜೂನ್ 5ರಂದು ಬೋಯಿಂಗ್‌ನ ಸ್ಟಾರ್‌ಲಿಂಕ್ ಗಗನನೌಕೆಯಲ್ಲಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ(ಐಎಸ್‌ಎಸ್) ತೆರಳಿದ್ದ ಕ್ರೂ-9 ಮಿಷನ್‌ನ ಸಿಬ್ಬಂದಿಗಳಾದ ಸುನಿತಾ ಮತ್ತು ಬುಚ್, ಗಗನನೌಕೆಯಲ್ಲಿ ತಲೆದೋರಿದ ತಾಂತ್ರಿಕ ದೋಷದಿಂದಾಗಿ 9 ತಿಂಗಳಿಗೂ ಹೆಚ್ಚು ಕಾಲ ಬಾಹ್ಯಾಕಾಶ ನಿಲ್ದಾಣದಲ್ಲಿಯೇ ಉಳಿದುಕೊಳ್ಳಬೇಕಾಯಿತು.
ಸುನಿತಾ ಮತ್ತು ಬುಚ್ ಅವರನ್ನು ಭುವಿಗೆ ತರಲು ಜಂಟಿಯಾಗಿ ಯೋಜನೆ ರೂಪಿಸಿದ್ದ ನಾಸಾ ಮತ್ತು ಸ್ಪೇಸ್‌ಎಕ್ಸ್, ಭಾನುವಾರ ನಾಲ್ವರು ಗಗನಯಾತ್ರಿಗಳನ್ನೊಗಳಗೊಂಡ ಕ್ರೂ-10 ಮಿಷನ್‌ನ 'ಡ್ರ್ಯಾಗನ್' ಗಗನನೌಕೆಯನ್ನು ಐಎಸ್‌ಎಸ್‌ಗೆ ಕಳುಹಿಸಿತ್ತು. ಇದೀಗ 'ಡ್ರ್ಯಾಗನ್' ಸುನಿತಾ-ಬುಚ್ ಅವರನ್ನು ಭೂಮಿಗೆ ಮರಳಿ ಕರೆತರುವಲ್ಲಿ ಯಶಸ್ವಿಯಾಗಿದೆ.