HEALTH TIPS

ಸ್ಟೋರ್‌ ರೂಂನಲ್ಲಿ ಸಿಕ್ಕ ಹಣ ನಮ್ಮದಲ್ಲ: ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ವರ್ಮ

ನವದೆಹಲಿ: ತಮ್ಮ ಅಧಿಕೃತ ನಿವಾಸದಲ್ಲಿ ಭಾರೀ ಪ್ರಮಾಣದ ಹಣ ಪತ್ತೆಯಾದ ಬಗ್ಗೆ ಪ್ರತಿಕ್ರಿಯಿಸಿರುವ ದೆಹಲಿ ಹೈಕೋರ್ಟ್‌ನ ಹಿರಿಯ ನ್ಯಾಯಮೂರ್ತಿ ಯಶವಂತ್ ವರ್ಮ, ನಾನಾಗಲಿ ಅಥವಾ ನನ್ನ ಕುಟುಂಬ ಸದಸ್ಯರಾಗಲಿ ಸ್ಟೋರ್ ರೂಂನಲ್ಲಿ ನಗದು ಇಟ್ಟಿಲ್ಲ ಎಂದು ಸ್ಪಷ್ಟನೆ ನೀಡಿದ್ದು, ತಮ್ಮ ವಿರುದ್ಧದ ಆರೋಪಗಳನ್ನು ಅಲ್ಲಗಳೆದಿದ್ದಾರೆ.

ತಮ್ಮ ನಿವಾಸದಲ್ಲಿ ಹಣ ಪತ್ತೆಯಾದ ಪ್ರಕರಣವು ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಲು ಮತ್ತು ಅಪಖ್ಯಾತಿ ತರಲು ನಡೆಸಿರುವ ಪಿತೂರಿಯಂತೆ ಸ್ಪಷ್ಟವಾಗಿ ಕಂಡುಬರುತ್ತಿದೆ ಎಂದು ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ಕೆ. ಉಪಾಧ್ಯಾಯ ಅವರಿಗೆ ಸಲ್ಲಿಸಿದ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಪ್ರಾರಂಭಿಸಿದ ಆಂತರಿಕ ತನಿಖೆಗೆ ಅನುಗುಣವಾಗಿ ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರ ಪ್ರತಿಕ್ರಿಯೆ ಕೇಳಿದ ನಂತರ ನ್ಯಾಯಮೂರ್ತಿ ವರ್ಮ ತಮ್ಮ ಉತ್ತರವನ್ನು ಸಲ್ಲಿಸಿದ್ದಾರೆ.

ನನ್ನ ವಿರುದ್ಧ ಆರೋಪ ಮತ್ತು ಮಾನಹಾನಿ ಮಾಡುವ ಮೊದಲು ಮಾಧ್ಯಮಗಳು ಸ್ವಲ್ಪ ವಿಚಾರಣೆ ನಡೆಸಬೇಕಾಗಿತ್ತು ಎಂದು ಅವರು ಹೇಳಿದ್ದಾರೆ. ಔಟ್‌ಹೌಸ್ ಸ್ಟೋರ್ ರೂಂನಲ್ಲಿ ಯಾವುದೇ ಹಣ ಅಥವಾ ನಗದು ಇಟ್ಟಿರುವ ಬಗ್ಗೆ ತಮಗೆ ತಿಳಿದಿರಲಿಲ್ಲ ಎಂದು ನ್ಯಾಯಮೂರ್ತಿ ವರ್ಮಾ ತಿಳಿಸಿದ್ದಾರೆ.

ನಗದಿನ ಬಗ್ಗೆ ನನಗಾಗಲಿ ಅಥವಾ ನನ್ನ ಕುಟುಂಬ ಸದಸ್ಯರಿಗಾಗಲಿ ಗೊತ್ತಿರಲಿಲ್ಲ. ಹಾಗಾಗಿ, ಆ ಹಣಕ್ಕೆ ನನಗಾಗಲಿ ಅಥವಾ ನನ್ನ ಕುಟುಂಬಕ್ಕಾಗಲಿ ಯಾವುದೇ ಸಂಬಂಧವಿರಲಿಲ್ಲ. ಅಗ್ನಿ ಅವಘಡ ಸಂಭವಿಸಿದ ರಾತ್ರಿ ಹಣ ಸಿಕ್ಕಿರುವ ಬಗ್ಗೆ ನನ್ನ ಕುಟುಂಬ ಸದಸ್ಯರು ಅಥವಾ ಸಿಬ್ಬಂದಿಯ ಗಮನಕ್ಕೆ ತರಲಾಗಿಲ್ಲ ಎಂದು ಹೇಳಿದ್ದಾರೆ.

'ಸ್ಟೋರ್‌ ರೂಂನಲ್ಲಿ ಹಣ ಸಿಕ್ಕಿದೆ ಎಂಬ ಆರೋಪವನ್ನು ನಾನು ಬಲವಾಗಿ ನಿರಾಕರಿಸುತ್ತೇನೆ. ಮೇಲೆ ತಿಳಿಸಿದಂತೆ, ನಮಗೆ ಯಾವುದೇ ಸುಟ್ಟ ಹಣದ ಚೀಲಗಳನ್ನು ತೋರಿಸಲಾಗಿಲ್ಲ. ಅಗ್ನಿ ಅವಘಡ ಸಂಭವಿಸಿದ ಕೊಠಡಿಯಲ್ಲಿ ಕೆಲ ಅವಶೇಷ ಈಗಲೂ ಇದೆ'ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಮಾರ್ಚ್ 14ರ ಮಧ್ಯರಾತ್ರಿ ತಮ್ಮ ಅಧಿಕೃತ ನಿವಾಸದ ಸಿಬ್ಬಂದಿ ಕ್ವಾರ್ಟರ್ಸ್ ಬಳಿಯಿರುವ ಸ್ಟೋರ್ ರೂಂನಲ್ಲಿ ಬೆಂಕಿ ಕಾಣಿಸಿಕೊಂಡಿತು ಎಂದು ಹೇಳಿದ್ದಾರೆ.

ಈ ಕೊಠಡಿಯನ್ನು ಬಳಸದ ಪೀಠೋಪಕರಣಗಳು, ಬಾಟಲಿಗಳು, ಪಾತ್ರೆಗಳು, ಹಾಸಿಗೆಗಳು, ಬಳಸಿದ ಕಾರ್ಪೆಟ್‌ಗಳು, ಹಳೆಯ ಸ್ಪೀಕರ್‌ಗಳು, ಉದ್ಯಾನ ಉಪಕರಣಗಳು ಮತ್ತು ಸಿಪಿಡಬ್ಲ್ಯು ವಸ್ತುಗಳನ್ನು ಸಂಗ್ರಹಿಸಲು ಬಳಸುತ್ತಿದ್ದರು ಎಂದು ಅವರು ಹೇಳಿದ್ದಾರೆ.

ಈ ಕೊಠಡಿಗೆ ಬೀಗ ಹಾಕಿರುವುದಿಲ್ಲ. ಅಧಿಕೃತ ಮುಂಭಾಗದ ಗೇಟ್ ಮತ್ತು ಸಿಬ್ಬಂದಿ ಕ್ವಾರ್ಟರ್ಸ್‌ನ ಹಿಂಬಾಗಿಲಿನಿಂದಲೂ ಪ್ರವೇಶಿಸಬಹುದು. ಇದಕ್ಕೆ ಮುಖ್ಯ ನಿವಾಸದಿಂದ ಸಂಪರ್ಕವಿಲ್ಲ. ಟೈಮ್ಸ್ ಆಫ್ ಇಂಡಿಯಾ ಮತ್ತು ಇತರ ಕೆಲವು ವರದಿಗಳಲ್ಲಿ ಪ್ರಕಟವಾದಂತೆ ಇದು ಖಂಡಿತವಾಗಿಯೂ ನನ್ನ ಮನೆಯ ಒಂದು ಕೋಣೆಯಲ್ಲ ಎಂದು ಹೇಳಿದ್ದಾರೆ.

'ಅಗ್ನಿ ಅವಘಡ ಸಂಭವಿಸಿದ ದಿನ ನಾನು ಮತ್ತು ನನ್ನ ಹೆಂಡತಿ ದೆಹಲಿಯಲ್ಲಿ ಇರಲಿಲ್ಲ. ಮಧ್ಯಪ್ರದೇಶಕ್ಕೆ ತೆರಳಿದ್ದೆವು. ನನ್ನ ಮಗಳು ಮತ್ತು ವಯಸ್ಸಾದ ತಾಯಿ ಮಾತ್ರ ಮನೆಯಲ್ಲಿದ್ದರು. ನಾನು ಮಾರ್ಚ್ 15ರ ಸಂಜೆ ಭೋಪಾಲ್‌ನಿಂದ ಭೋಪಾಲ್‌ನಿಂದ ಇಂಡಿಗೊ ವಿಮಾನದಲ್ಲಿ ನನ್ನ ಪತ್ನಿಯೊಂದಿಗೆ ದೆಹಲಿಗೆ ಮರಳಿದೆ'ಎಂದು ಅವರು ವಿವರಿಸಿದ್ದಾರೆ.

ಮಧ್ಯರಾತ್ರಿಯ ಸುಮಾರಿಗೆ ಬೆಂಕಿ ಕಾಣಿಸಿಕೊಂಡಾಗ, ತಮ್ಮ ಮಗಳು ಮತ್ತು ಖಾಸಗಿ ಕಾರ್ಯದರ್ಶಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದರು ಎಂದು ತಿಳಿಸಿದ್ದಾರೆ.

ಬೆಂಕಿ ನಂದಿಸುವ ಕಾರ್ಯಾಚರಣೆಯ ಸಮಯದಲ್ಲಿ ಎಲ್ಲ ಸಿಬ್ಬಂದಿ ಮತ್ತು ನನ್ನ ಮನೆಯ ಸದಸ್ಯರನ್ನು ಸುರಕ್ಷತಾ ಕಾರಣಗಳಿಗಾಗಿ ಸ್ಥಳದಿಂದ ದೂರ ಹೋಗುವಂತೆ ತಿಳಿಸಲಾಗಿತ್ತು. ಬೆಂಕಿ ನಂದಿಸಿದ ನಂತರ ಅವರು ಘಟನಾ ಸ್ಥಳಕ್ಕೆ ಹಿಂತಿರುಗಿದಾಗ, ಅವರಿಗೆ ಸ್ಥಳದಲ್ಲಿ ಯಾವುದೇ ನಗದು ಕಂಡಿಲ್ಲ ಎಂದು ತಿಳಿಸಿದ್ದಾರೆ.

'ನಾನು ಅಥವಾ ನನ್ನ ಕುಟುಂಬದ ಯಾವುದೇ ಸದಸ್ಯರು ಆ ಸ್ಟೋರ್ ರೂಂನಲ್ಲಿ ಯಾವುದೇ ಹಣವನ್ನು ಇರಿಸಿಲ್ಲ ಎಂದು ನಿಸ್ಸಂದಿಗ್ಧವಾಗಿ ಹೇಳುತ್ತೇನೆ. ಆ ಹಣ ನಮಗೆ ಸೇರಿದ್ದಲ್ಲ. ಆರೋಪಗಳನ್ನು ಬಲವಾಗಿ ಖಂಡಿಸುತ್ತೇನೆ' ಎಂದು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries