ಸಿಂಗಪುರ: ದೇಶದಲ್ಲಿ ಕಡ್ಡಾಯ ರಾಷ್ಟ್ರೀಯ ಸೇವೆ ಸಲ್ಲಿಸಲು ವಿಫಲರಾದ ಆರೋಪದಡಿಯಲ್ಲಿ ಭಾರತ ಮೂಲದ 28 ವರ್ಷದ ಸಿಂಗಪುರ ವ್ಯಕ್ತಿಯೊಬ್ಬರಿಗೆ ಇಲ್ಲಿನ ನ್ಯಾಯಾಲಯವು ಗುರುವಾರ 14 ವಾರಗಳ ಜೈಲುಶಿಕ್ಷೆ ವಿಧಿಸಿದೆ.
ಇಲ್ಲಿನ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದ ಸುಂದರೇಶ್ ಮೆನನ್, ನ್ಯಾಯಮೂರ್ತಿ ತೆ ಯಾಂಗ್ ಕ್ವಾಂಗ್, ವಿನ್ಸೆಂಟ್ ಹೂಂಗ್ ನೇತೃತ್ವದ ನ್ಯಾಯಪೀಠವು ಕೆಳ ನ್ಯಾಯಾಲಯವು ನೀಡಿದ ಆದೇಶವನ್ನು ಎತ್ತಿ ಹಿಡಿದಿದೆ.
ಸಿಂಗಪುರದಲ್ಲಿ ಜನಿಸಿದ ಎಲ್ಲ ಗಂಡುಮಕ್ಕಳು ತಮ್ಮ 16.5 ವಯಸ್ಸಿನಲ್ಲಿ ರಾಷ್ಟ್ರೀಯ ಸೇವೆ ಬಾಧ್ಯತೆ ಕಾನೂನಿನಡಿಯಲ್ಲಿ ಸೇವೆ ಸಲ್ಲಿಸುವುದು ಕಡ್ಡಾಯ. ಈ ವೇಳೆ ಹೊರದೇಶದಲ್ಲಿ ಉನ್ನತ ಶಿಕ್ಷಣ ಪಡೆಯಲು ಇಚ್ಛಿಸಿದರೆ, ನಿರ್ಗಮನ ಪರವಾನಗಿ ಪತ್ರ ಹೊಂದಿರಬೇಕು. ಆದರೆ, ನರೇಶ್ ಕುಮಾರ್ ನಾಗೇಶ್ವರನ್ ಈ ಕಾನೂನು ಉಲ್ಲಂಘಿಸಿದ್ದರಿಂದ ಶಿಕ್ಷೆಗೆ ಗುರಿಯಾಗಿದ್ದಾರೆ.