ಮಧೂರು : ಕುಂಬಲೆ ಸಿಮೆಯ ಇತಿಹಾಸಪ್ರಸಿದ್ಧ ಹಾಗೂ ಪುರಾತನ ದೇವಾಳಯಗಳಲ್ಲಿ ಒಂದಗಿರುವ ಮಧೂರು ಶ್ರೀಮದನಂತೇಶ್ವರ ಸಿದ್ದಿವಿನಾಯಕ ದೇವಸ್ಥಾನದ ಪುನ:ಪ್ರತಿಷ್ಠಾ ಬ್ರಹ್ಮಕಲಶೋತ್ಸವ, ಮೂಡಪ್ಪ ಸೇವೆಗೆ ನಾಲ್ಕು ದಿವಸ ಬಾಕಿ ಉಳಿದಿರುವಂತೆ ಕೆಲಸ ಕಾರ್ಯಗಳು ಬಿರುಸಿನಿಂದ ಸಾಗಲಾರಂಭಿಸಿದೆ. ಪ್ರತಿದಿನ ನೂರರು ಮಂದಿ ಸ್ವಯಂಸೇವಕರು ಶ್ರಮದಾನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಕಾಸರಗೋಡು ಜಿಲ್ಲೆಯಲ್ಲಿ ಅತೀ ಎತ್ತರದ ದ್ವಜಸ್ತಂಬ ಎಂಬ ಹೆಗ್ಗಳಿಕೆ ಹೊಂದಿರುವ ಮಧೂರು ದೇಗುಲದ ಕೊಡಿಮರಕ್ಕೆ ತಾಮ್ರದ ಹೊದಿಕೆ ಅಳವಡಿಸುವ ಕಾರ್ಯ ಅಂತಿಮ ಹಂತದಲ್ಲಿದೆ. ದ್ವಜಸ್ತಂಬ ಅಳವಡಿಸಿದ ಕಗ್ಗಲ್ಲಿಗೆ ಕವಚ ಹೊದಿಸುವ ಕಾರ್ಯ ನಡೆಯುತ್ತಿದೆ. ಪುತ್ತೂರಿನ ಲೋಕೇಶ ಆಚಾರ್ಯ ನೇತೃತ್ವದ 6 ಮಂದಿ ನುರಿತ ಕಾರ್ಮಿಕರ ತಂಡ ತಾಮ್ರದ ಹೊದಿಕೆ ಅಳವಡಿಸುವ ಕಾರ್ಯದಲ್ಲಿ ನಿರತವಾಗಿದೆ.
ದೇವಾಲಯದ ಅಸುಪಾಸು ನಾಲ್ಕು ವೇದಿಕೆಗಳು ಸಜ್ಜುಗೊಳ್ಳುತ್ತಿದ್ದು, ಇಲ್ಲಿ ನಿರಂತರ ಧಾಮಿಕ, ಸಾಂಸ್ಕøತಿಕ ಕಾರ್ಯಕ್ರಮ ಜರುಗಲಿದೆ. ದೇವಾಲಯದ ಎದುರಿನ ಮಧುವಹಿನಿ ಹೊಳೆಗೆ ಅಡ್ಡ ಮಣ್ಣು ಹಾಕಿ ಹಾದಿಮಾಡಿಕೊಡಲಾಗಿದ್ದು, ಇದೇ ಹಾದಿಯಾಗಿ ವೇದಿಕೆಗಳಿಗೆ ಹಾಗೂ ಅನ್ನಛತ್ರದ ಕಡೆಗೂ ಸಂಚರಿಸಬಹುದಾಗಿದೆ. ಮಾ. 23ರಂದು ವಿಶ್ವ ಹಿಂದೂ ಪರಿಷತ್ ವತಿಯಿಂದ ಬೃಹತ್ ಶ್ರಮದಾನ ದೇವಾಲಯದಲ್ಲಿ ಆಯೋಜಿಸಲಾಗಿದೆ. ದೇವಾಲಯದ ಬಲಭಾಗಕ್ಕೆ ಹೊಂದಿಕೊಂಡಿರುವ ಚಪ್ಪರದಲ್ಲಿ ಉಗ್ರಾಣ ನಿರ್ಮಿಸಲಾಗಿದ್ದು, ತರಕಾರಿ ಸಏರಿದಮತೆ ಸಾಮಗ್ರಿ ಹೊತ್ತ ವಾಹನಗಳಿಗೆ ಹೊರಾಂಗಣದಿಂದ ಒಳಪ್ರವೇಶಿಸಲು ಹಾದಿಮಾಡಿಕೊಡಲಾಗಿದೆ.
ಭಾರೀ ಸಂಖ್ಯೆಯಲ್ಲಿ ಭಕ್ತಾದಿಗಳು ಬಂದುಸೇರುವ ಹಿನ್ನೆಲೆಯಲ್ಲಿ ಲಡ್ಡು ತಯಾರಿಯನ್ನು ಯಂತ್ರದ ಮೂಲಕ ತಯಾರಿಸುವ ಪ್ರಕ್ರಿಯೆ ಈಗಾಗಲೇ ಅರಂಭಗೊಂಡಿದೆ.
ಚಿತ್ರಗಳು: ದೇವಾಲಯದ ದ್ವಜಸ್ತಂಬಕ್ಕೆ ತಾಮ್ರದ ಹೊದಿಕೆ ಅಳವಡಿಸುವ ಕೆಲಸ ಬಿರುಸಿನಿಂದ ಸಾಗುತ್ತಿರುವುದು,2)(3) ದೇವಾಲಯದ ಲಡ್ಡು ತಯಾರಿ ಯಂತ್ರ.