ಪೆರ್ಲ: ನಾಲಂದ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ, ಭೂಮಿತ್ರ ಸೇನೆ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಅರಣ್ಯ ದಿನ ಆಚರಿಸಲಾಯಿತು. ಇದರ ಅಂಗವಾಗಿ ಎಣ್ಮಕಜೆ ಗ್ರಾಮ ಪಂಚಾಯತಿ ಸದಸ್ಯೆ ರೂಪಾವಣಿ ಆರ್.ಭಟ್ ಅವರ ಮನೆಗೆ ಭೇಟಿ ನೀಡಿ `ಟೆರೇಸ್ ಗಾರ್ಡನ್' ಕುರಿತು ಮಕ್ಕಳು ಮಾಹಿತಿ ಸಂಗ್ರಹಿಸಿದರು.
ಪೆರ್ಲ ಕೃಷಿ ಭವನದ ಉಪಕೃಷಿ ಅಧಿಕಾರಿ ಮೋಹನ್ ಅವರು ಕೃಷಿ ಜೀವನದಲ್ಲಿ ಯುವ ಜನತೆಯ ಪಾತ್ರ ಮತ್ತು ಮುಂದಿನ ದಿನಗಳಲ್ಲಿ ನೀರು ಉಳಿಸುವಲ್ಲಿ ಕಾಡುಗಳ ಪಾತ್ರ ಎಂಬ ವಿಷಯದ ಬಗ್ಗೆ ಮಾಹಿತಿ ನೀಡಿದರು. ಭೂಮಿತ್ರ ಸೇನಾ ಕ್ಲಬ್‍ನ ಸಂಯೋಜಕಿ ಅನುಪಮಾ ಕಾರ್ಯಕ್ರಮ ಸಂಯೋಜಿಸಿದರು. ಕಾರ್ಯಕ್ರಮದಲ್ಲಿ ಎಣ್ಮಕಜೆ ಗ್ರಾಮ ಪಂಚಾಯತಿ ಸದಸ್ಯೆ ರೂಪವಾಣಿ ಆರ್.ಭಟ್, ಉಪ ಆರೋಗ್ಯ ಅಧಿಕಾರಿ ಹರೀಶ್ ಹಾಗೂ ಆಶಾ ಕಾರ್ಯಕರ್ತೆ ಜಾನಕಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.