ಸಮರಸ ಚಿತ್ರಸುದ್ದಿ: ಮಧೂರು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ನೂತನ ಶಿಲಾಮಯ ರಾಜಗೋಪುರದ ಎದುರು ಬಹುಭಾಷಾನಟ ಸುಮನ್ ತಳ್ವಾರ್ ಇ ರೀತಿ ಕಾಣಿಸಿಕೊಂಡರು.
ಅವರು ನಿನ್ನೆ ಸನ್ನಿಧಿಯಲ್ಲಿ ನಡೆದ ರಾಜಗೋಪುರ ಉದ್ಘಾಟನೆ ಮತ್ತು ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಹಿಂದೂ ಸಮಾಜ ಒಗ್ಗೂಡಬೇಕು. ಇತರ ಮತ ಪಂಥಗಳೊಡನೆ ಸಮನ್ವಯದಿಂದಿರುವ ಹಿಂದೂಗಳ ಮುಗ್ದತೆಯನ್ನು ದುರ್ಬಳಕೆಗೈದು ಹಿಂದೂಗಳ ಮೇಲಿನ ಧಮನ ನೀತಿಗಳಿಗೆ ಯುವಕರು ಮುಂದೆಬಂದು ತಕ್ಕ ಉತ್ತರ ನೀಡುವುದರಲ್ಲಿ ತಪ್ಪಿಲ್ಲ. ಯುವ ಸಮಾಜ ಹೆತ್ತವರನ್ನು ಗೌರವಿಸಿ, ಅವರೊಂದಿಗೆ ಬದುಕುವ ಪರಂಪರೆಯನ್ನು ಇನ್ನೂ ಕಾಪಿಡಬೇಕು. ತಾಯಿಗಿಂತ ದೊಡ್ಡ ಅಧಿದೈವ ಬೇರೊಂದಿಲ್ಲ. ದೇವರ ಬಗೆಗಿನ ಅಛಲ ಭಕ್ತಿ ಯಶಸ್ಸು ತಂದೊದಗಿಸುತ್ತದೆ. ತನ್ನ ಚಿತ್ರರಂಗದ ಸಾಧನೆಗೆ ದೇವರ ಮತ್ತು ಮಾತಾಪಿತೃಗಳ ಆಶೀರ್ವಾದ ಇದೆ ಎಂದು ತಿಳಿಸಿದರು.