ಲಖನೌ: ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಇಂದು (ಭಾನುವಾರ) ತಮ್ಮ ಸೋದರಳಿಯ ಆಕಾಶ್ ಆನಂದ್ ಅವರನ್ನು ಪಕ್ಷದ ಎಲ್ಲಾ ಹುದ್ದೆಗಳಿಂದ ತೆಗೆದುಹಾಕಿದ್ದಾರೆ.ಈ ಮೂಲಕ ತಾವು ಜೀವಂತವಾಗಿರುವವರೆಗೂ ತಮ್ಮ ಉತ್ತಾರಾಧಿಕಾರಿಯಾಗಿ ಯಾರೂ ಇರುವುದಿಲ್ಲ ಎಂದು ತಿಳಿಸಿದ್ದಾರೆ.
ಪಕ್ಷದ ಪದಾಧಿಕಾರಿಗಳ ಉನ್ನತ ಮಟ್ಟದ ಸಭೆಯಲ್ಲಿ ಮಾಯಾವತಿ ಈ ನಿರ್ಣಯವನ್ನು ಪ್ರಕಟಿಸಿದರು.
ಪಕ್ಷವು ಸರ್ವೋಚ್ಚ ಬಳಿಕ ಸಂಬಂಧಗಳಿಗೆ ಆದ್ಯತೆ ನೀಡಲಾಗುವುದು. ಈ ಹಿಂದೆ ಸೋದರಳಿಯ ಆಕಾಶ್ ಆನಂದ್ ಅವರನ್ನು ತಮ್ಮ ಉತ್ತಾರಾಧಿಕಾರಿಯಾಗಿ ಘೋಷಿಸಿದ್ದರು. ಬಳಿಕ ತಮ್ಮ ಸಹೋದರ ಆನಂದ್ ಕುಮಾರ್ ಮತ್ತು ರಾಮ್‌ಜಿ ಗೌತಮ್ ಅವರನ್ನು ಪಕ್ಷದ ರಾಷ್ಟ್ರೀಯ ಸಂಯೋಜಕರಾಗಿ ನೇಮಿಸಿದ್ದಾರೆ.
ಪಕ್ಷದ ಎಲ್ಲಾ ಹುದ್ದೆಗಳಿಂದ ಆಕಾಶ್ ಆನಂದ್ ಅವರನ್ನು ವಜಾಗೊಳಿಸಿದ್ದಾರೆ. ಗುಂಪುಗಾರಿಕೆ ಮತ್ತು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ ಆರೋಪದ ಮೇಲೆ ಆಕಾಶ್ ಆನಂದ್ ಅವರ ಮಾವ ಅಶೋಕ್ ಸಿದ್ಧಾರ್ಥ್ ಅವರನ್ನು ಪಕ್ಷದಿಂದ ಉಚ್ಚಾಟಿಸುವುದಾಗಿ ಕಳೆದ ತಿಂಗಳು ಘೋಷಿಸಿದ್ದರು.
ಪಕ್ಷವನ್ನು ಬಲಪಡಿಸಲು, ಸಾಂಸ್ಥಿಕ ನ್ಯೂನತೆಗಳನ್ನು ಪರಿಹರಿಸಲು ಈ ಸಭೆಯನ್ನು ನಡೆಸಲಾಗಿದೆ ಎಂದು ತಿಳಿದು ಬಂದಿದೆ.
'ಹೆಚ್ಚುತ್ತಿರುವ ಹಣದುಬ್ಬರ, ಬಡತನ, ನಿರುದ್ಯೋಗ ಬಗ್ಗೆ ಪ್ರಸ್ತಾಪಿಸಲಾಗಿದ್ದು, ಸರ್ಕಾರ ಇವುಗಳನ್ನು ನಿರ್ಲಕ್ಷಿಸುತ್ತಿದೆ' ಎಂದು ಮಾಯಾವತಿ ಸಭೆಯಲ್ಲಿ ಚರ್ಚಿಸಿದ್ದಾರೆ.