ಕಾಸರಗೋಡು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವೆಯ ಕಾರ್ಯಕ್ರಮದ ಯಶಸ್ಸಿಗೆ ಕಾಸರಗೋಡು ನಗರ ಅಲಂಕಾರ ತಯಾರಿಗೆ ನಗರದ ಎಲ್ಲಾ ಸಂಘ ಸಂಸ್ಥೆ ಹಾಗೂ ಅಟೋ, ಟ್ಯಾಕ್ಸಿ ಸ್ಟಾಂಡ್ ಇದರ ಪದಾಧಿಕಾರಿಗಳ ವಿಶೇಷ ಸಭೆ ಪೇಟೆ ಶ್ರೀ ವೆಂಕಟರಮಣ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ಕೆ.ಎನ್. ವೆಂಕಟ್ರಮಣ ಹೊಳ್ಳ ಅವರ ಅಧ್ಯಕ್ಷತೆಯಲ್ಲಿ ಸಭೆ ಜರಗಿತು.
ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಈ ಸಭೆಯಲ್ಲಿ ಉಪಸ್ಥಿರಿದ್ದರು. ತಾಲೂಕ ಕಛೇರಿ ಭಾಗದಿಂದ ಕರಂದಕ್ಕಾಡ್ ತನಕ ಆಯಾ ಸಂಘಟನೆಯವರು ಅಲಂಕಾರ ಮಾಡಲು ತೀರ್ಮಾನಿಸಲಾಯಿತು. ಸಭೆಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಸದಸ್ಯರಾದ ಶ್ರೀ ಕೇಶವ ಎ. ಇವರು ಅಲಂಕಾರ ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡಿದರು. ಪ್ರಾದೇಶಿಕ ಸಮಿತಿ ಕಾರ್ಯದರ್ಶಿ ತುಕರಾಮ ಆಚಾರ್ಯ ಕೆರೆಮನೆ, ಪಾಂಡುರಂಗ ಅಟೋ ಸ್ಟಾಂಡಿನ ಸದಾಶಿವ ಸೀತಂಗೋಳಿ, ಅರವಿಂದ ಗಂಗೆ, ಮನೋಹರ ಅಡ್ಕತ್ ಬೈಲ್, ಶ್ರೀ ಮಲ್ಲಿಕಾರ್ಜುನ ಟ್ಯಾಕ್ಸಿ ಸ್ಟಾಂಡಿನ ಜಯರಾಮ್, ಪ್ರಮೋದ್ ಎಸ್.ವಿ.ಟಿ. ಧರ್ಮಶಾಸ್ತಾ ಸೇವಾ ಸಂಘದ ಪದಾಧಿಕಾರಿಗಳಾದ ಗಿರೀಶ್ ಆಚಾರ್ಯ, ಆನಂದಕೃಷ್ಣ, ಕಿಂಗ್ ಕೋಬ್ರಾ ಅಟೋ ಸ್ಟಾಂಡಿನ ಹಾಗೂ ಕಟ್ಟೆ ಸಮಿತಿಯ ಕಾರ್ಯಕರ್ತರಾದ ಕಿರಣ್, ನವೀನ್ ಕುಮಾರ್ ಶೆಟ್ಟಿ, ಎಸ್.ವಿ.ಟಿ ಯ ಕಿಶೋರ್ ಕುಮಾರ್, ಸಂತೋμï ಕುಮಾರ್ ಭಂಡಾರಿ, ವಸಂತ್ ಕೆರೆಮನೆ, ಮಠದಪೇಟೆ ಅಟೋ ಸ್ಟಾಂಡ್ ಕಾರ್ಯಕರ್ತರಾದ ರಮೇಶ್, ಬೀರಂತ್ ಬೈಲಿನ ಪ್ರಶಾಂತ್ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು. ಕರಂದಕ್ಕಾಡ್ ಪ್ರಾದೇಶಿಕ ಸಮಿತಿಯ ಅಧ್ಯಕ್ಷರಾದ ಶ್ರೀ ಹರೀಶ್ ಕೆ.ಆರ್ ಸ್ವಾಗತಿಸಿ ವಿವೇಕಾನಂದ ನಗರ ಪ್ರಾದೇಶಿಕ ಸಮಿತಿ ಅಧ್ಯಕ್ಷ ವಿಶ್ವನಾಥ್ ಶೆಟ್ಟಿ ವಂದಿಸಿದರು.